77.2 ಕೋಟಿಗೂ ಅಧಿಕ ಇಮೇಲ್ ವಿಳಾಸ, 2.1 ಕೋಟಿಗೂ ಹೆಚ್ಚು ಪಾಸ್‍ವರ್ಡ್ ಹ್ಯಾಕ್

Update: 2019-01-18 09:07 GMT

ಕ್ಯಾಲಿಫೋರ್ನಿಯಾ,ಜ.18 : ಹೊಸ ವರ್ಷದ ಮೊದಲ ತಿಂಗಳಲ್ಲೇ ಅಂತರ್ಜಾಲ ಬಳಕೆದಾರರಿಗೆ ಆಘಾತಕಾರಿ ಸುದ್ದಿ ಬಂದಿದೆ ಮೆಗಾ ಎಂಬ ಕ್ಲೌಡ್ ಸ್ಟೋರೇಜ್ ಸಾಧನದಲ್ಲಿ ಸಂಗ್ರಹಿಸಿಡಲಾದ  87 ಜಿಬಿಗಿಂತಲೂ ಅತ್ಯಧಿಕ  ಪ್ರಮಾಣದ ಇಮೇಲ್ ವಿಳಾಸ ಮತ್ತು ಪಾಸ್ ವರ್ಡ್ ಗಳು ಹ್ಯಾಕ್ ಆಗಿವೆ. ಈ ರೀತಿ ಸೋರಿಕೆಯಾದ ಇಮೇಲ್ ಐಡಿಗಳ ಸಂಖ್ಯೆ 77.2 ಕೋಟಿಗೂ ಅಧಿಕವಾಗಿದ್ದು 2.1 ಕೋಟಿಗೂ ಹೆಚ್ಚು ವಿಶಿಷ್ಟ ಪಾಸ್‍ವರ್ಡ್‍ಗಳೂ ಸೋರಿಕೆಯಾಗಿದ್ದು ಹ್ಯಾಕರ್ ಗಳು ಇವುಗಳನ್ನು ಕಲೆಕ್ಷನ್# ಎಂಬ ಫೋಲ್ಡರ್ ನಲ್ಲಿ ಇರಿಸಿ ಅದರ ಲಿಂಕ್ ಅನ್ನೂ ಪೋಸ್ಟ್ ಮಾಡಿದ್ದಾರೆ. ಈ ಫೋಲ್ಡರ್ ನಲ್ಲಿ 12,000ಕ್ಕೂ ಅಧಿಕ ಪ್ರತ್ಯೇಕ ಫೈಲ್ ಗಳಿವೆ.

2008ರಿಂದ  ನಡೆದ ವಿವಿಧ ಮಾಹಿತಿ ಸೋರಿಕೆಗಳನ್ನೆಲ್ಲಾ ಸೇರಿಸಿ ಈ ಇಮೇಲ್ ಮತ್ತು ಪಾಸ್ ವರ್ಡ್ ಗಳಿರುವ ಫೋಲ್ಡರ್ ರಚಿಸಲಾಗಿದೆ ಎಂದು ತಿಳಿಯಲಾಗಿದೆ.

ಸೆಕ್ಯುರಿಟಿ ಸಂಶೋಧಕ ಟ್ರಾಯ್ ಹಂಟ್ ಈ ಇಮೇಲ್ ವಿಳಾಸ ಮತ್ತು ಪಾಸ್ ವರ್ಡ್‍ಗಳನ್ನು ತಮ್ಮ ವೆಬ್ ತಾಣ Have I Been Pwned ಇದರಲ್ಲಿ ಪೋಸ್ಟ್ ಮಾಡಿದ್ದಾರೆ.

ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದು  ಒಟ್ಟು 77,29,04,991 ವಿಶಿಷ್ಟ ಇಮೇಲ್ ವಿಳಾಸ ಹಾಗೂ ಒಟ್ಟು 2,12,22,975 ವಿಶಿಷ್ಟ ಪಾಸ್ ವರ್ಡ್‍ಗಳನ್ನು ಹ್ಯಾಕ್ ಮಾಡಲಾಗಿರುವುದನ್ನು ಅವರು ದೃಢ ಪಡಿಸಿದ್ದಾರೆ.

ನಿಮ್ಮ ಇಮೇಲ್ ಹ್ಯಾಕ್ ಆಗಿದೆಯೇ ಎಂದು ತಿಳಿಯುವುದು ಹೇಗೆ ?

Have I Been Pwned ವೆಬ್ ತಾಣಕ್ಕೆ ಹೋಗಿ ನಿಮ್ಮ ಇಮೇಲ್ ವಿಳಾಸ ಟೈಪ್ ಮಾಡಿದರೆ ಸಾಕು  ನಿಮ್ಮ ಇಮೇಲ್ ಹ್ಯಾಕ್ ಆಗಿದೆಯೇ?, ಇಲ್ಲಿಯ ತನಕ ಎಷ್ಟು ಬಾರಿ ಹ್ಯಾಕ್ ಆಗಿದೆ ಎಂದು ತಿಳಿಯುವುದು. ಪ್ರತಿಯೊಂದು ಸೋರಿಕೆಯಲ್ಲೂ ನಿಮ್ಮ ಎಷ್ಟು ಮಾಹಿತಿ ಹ್ಯಾಕ್ ಆಗಿದೆ ಎಂಬ ಮಾಹಿತಿಯೂ ದೊರೆಯುವುದು.

ಇದೇ ಸಂಸ್ಥೆಯ ಇನ್ನೊಂದು ವೆಬ್ ತಾಣ Pwned Passwordಗೆ ಹೋದರೂ ನೀವು ಮಾಹಿತಿ  ಪಡೆಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News