ಹುಬ್ಬಳ್ಳಿ: ದಾವತ್-ಎ-ಇಸ್ಲಾಮಿ ಸಂಘಟನೆ ವತಿಯಿಂದ ರಾಜ್ಯ ಸಮಾವೇಶ

Update: 2019-01-18 10:58 GMT

ಹುಬ್ಬಳ್ಳಿ, ಜ.18: ದುಶ್ಚಟ ಹಾಗೂ ಅಪರಾಧ ಮುಕ್ತ ಸಮಾಜ ಕಟ್ಟುವ ನಿಟ್ಟಿನಲ್ಲಿ ದಾವತ್-ಎ-ಇಸ್ಲಾಮಿ ಸಂಘಟನೆ ವತಿಯಿಂದ ಸುನ್ನಿ ಸಮಾಜದ ರಾಜ್ಯ ಸಮಾವೇಶವನ್ನು ಜ.19 ಹಾಗೂ 20ರಂದು ನಗರದ ಮಂಟೂರ ರಸ್ತೆ ಈದ್ಗಾ ಮೈದಾನದ ಬಳಿ ಆಯೋಜಿಸಲಾಗಿದೆ ಎಂದ ಸಂಘಟನೆಯ ಅಖಿಲ ಭಾರತ ಸಂಪರ್ಕಾಧಿಕಾರಿ ಸೈಯದ ಜುನೈದ ಅತ್ತಾರಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ನಮ್ಮ ಸಂಘಟನೆ ಪಕ್ಷಾತೀತವಾಗಿದ್ದು,  ಸಮಾಜವನ್ನು ಶೈಕ್ಷಣಿಕ, ಕೌಟಂಬಿಕ ಸಂಬಂಧ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಆರ್ಥಿಕವಾಗಿ ಬಲಿಷ್ಟಗೊಳಿಸುವ ಕುರಿತು ಸಮಾವೇಶದಲ್ಲಿ ಚಿಂತನ ಮಂಥನ ಮಾಡಲಾಗುವುದೆಂದರು. 

ಸಮಾವೇಶದಲ್ಲಿ ದೇಶದಾದ್ಯಂತ ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, 48 ಎಕರೆ ವಿಸ್ತೀರ್ಣದಲ್ಲಿ ಆಯೋಜಿಸಲಾದ ಸಮಾವೇಶದಲ್ಲಿ ಭಾಗವಹಿಸುವವರಿಗೆ ಊಟ, ವಸತಿ ಒದಗಿಸಲಾಗುತ್ತಿದೆ. ಪ್ರತ್ಯೇಕ ಪಾರ್ಕಿಂಗ್, ವಝು ಮತ್ತು ನಮಾಜಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ದಾವತ್-ಎ-ಇಸ್ಲಾಮಿ ಸಂಘಟನೆಯ ಅಖಿಲ ಭಾರತ ಮುಖಂಡರಾದ ನಾಸಿಕ್ ನ ಸೈಯದ ಆರೀಫ್ ಅಲಿ ಮುಖ್ಯ ಭಾಷಣ ಮಾಡಲಿದ್ದಾರೆ, ಇಂತಹ ಸಮಾವೇಶವನ್ನು 2002 ಹಾಗೂ 2013 ಹಳೇಹುಬ್ಬಳ್ಳಿ ಈದ್ಗಾ ಸಮಾವೇಶ ಆಯೋಜಿಸಲಾಗಿತ್ತು ಈಗ ಮಂಟೂರ ರಸ್ತೆ ಮಿಲ್ಲತ್ ನಗರ ಈದ್ಗಾ ಬಳಿ ಆಯೋಜಿಸಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ರಿಯಾಝ್ ಅಧೋನಿ, ನಿಝಾಮುದ್ದೀನ ಅನ್ಸಾರಿ, ಸಲೀಮ್ ಯಾದವಾಡ, ಸಿಮ್ನನ್ ರಝಾ, ತನ್ವೀರ್ ಕಲಘಟಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News