ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-01-18 18:31 GMT

ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಪ್ರತಿಭೆ ಆಧಾರಿತ):

ಬ್ರಿಟಿಷ್ ಕೌನ್ಸಿಲ್ 70ನೇ ವರ್ಷದ
ವಿದ್ಯಾರ್ಥಿವೇತನ 2019-20
ವಿವರ:
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಭಾಗದ ಮಹಿಳಾ ಅಭ್ಯರ್ಥಿಗಳು ಬ್ರಿಟನ್ ಮೂಲದ ಯಾವುದೇ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆಯಲು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹುದು.
ಅರ್ಹತೆ:
ಪ್ರತಿಭಾವಂತ ವಿದ್ಯಾರ್ಥಿಗಳಾಗಿರುವ ಮಹಿಳಾ ಅಭ್ಯರ್ಥಿಗಳು ಪ್ರಮಾಣೀಕೃತ ಬ್ರಿಟಿಷ್ ವಿಶ್ವವಿದ್ಯಾನಿಲ ಯದಿಂದ ಸ್ವೀಕರಿಸಲ್ಪಡಬೇಕು ಅಥವಾ ಒಂದು ವರ್ಷದ ಮಾಸ್ಟರ್ಸ್ ಶಿಕ್ಷಣಕ್ಕೆ ನೋಂದಾಯಿಸಿಕೊಂಡಿರಬೇಕು.
ನೆರವು:
ಸ್ನಾತಕೋತ್ತರ ಪದವಿ ಶಿಕ್ಷಣದ ಸಂಪೂರ್ಣ ಟ್ಯೂಶನ್ ಶುಲ್ಕ ಪಾವತಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಜನವರಿ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/BCY1

*****************

ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):

ಭಾರತ ಕಾಲೇಜು ಮಂಡಳಿ ವಿದ್ಯಾರ್ಥಿಗಳ ಕಾರ್ಯಕ್ರಮ
ವಿವರ:
ಸಮಾಜದ ಸೌಲಭ್ಯ ವಂಚಿತ ವಿಭಾಗದ ವಿದ್ಯಾರ್ಥಿಗಳು ಯಾವುದೇ ಹತ್ತು ಜೊತೆಗಾರಿಕೆ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಲು ಕಾಲೇಜು ಮಂಡಳಿ ವಿದ್ಯಾರ್ಥಿವೇತನ ನೀಡುತ್ತಿದೆ. ಹನ್ನೆರಡನೇ ತರಗತಿ ವಿದ್ಯಾರ್ಥಿಗಳು ಮಾರ್ಚ್ 2019ರಲ್ಲಿ ಎಸ್‌ಎಟಿ ಪರೀಕ್ಷೆ ಬರೆಯುವ ಅಗತ್ಯವಿದೆ. ಎಲ್ಲ ವಿದ್ಯಾರ್ಥಿಗಳಿಗೆ ಪರೀಕಾ್ಷ ಶುಲ್ಕ ರಿಯಾಯಿತಿ ನೀಡಲಾಗುವುದು.
ಅರ್ಹತೆ:
ಕುಟುಂಬದ ಆದಾಯ ವಾರ್ಷಿಕ 6 ಲಕ್ಷ ರೂ.ಗಿಂತ ಹೆಚ್ಚು ಇರದ ಹನ್ನೆರಡನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು ಅರ್ಹರು.
ನೆರವು:
ವಾರ್ಷಿಕ ಆರು ಲಕ್ಷ ರೂ.ಗೂ ಕಡಿಮೆ ಆದಾಯವಿರುವ ಕುಟುಂಬಗಳ ವಿದ್ಯಾರ್ಥಿಗಳ ಎಸ್‌ಟಿ ಪರೀಕ್ಷಾ ಶುಲ್ಕ (7000 ರೂ.) ವಿನಾಯಿತಿ ನೀಡಲಾಗುವುದು. ಪರೀಕ್ಷೆಯಲ್ಲಿ ಉತ್ತಮ ಅಂಕಪಡೆಯುವ ಕುಟುಂಬದ ವಾರ್ಷಿಕ ಆದಾಯ ನಾಲ್ಕು ಲಕ್ಷ ರೂ.ಗೂ ಕಡಿಮೆಯಿರುವ ವಿದ್ಯಾರ್ಥಿಗಳು ಯಾವುದೇ ಜೊತೆಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆಯಲು ಸಂಪೂರ್ಣ ಟ್ಯೂಶನ್ ಶುಲ್ಕ ಒದಗಿಸಲಾಗುವುದು. .
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 8, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/CBI1

********************

ವಿದ್ಯಾರ್ಥಿವೇತನ

(ಆದಾಯ ಆಧಾರಿತ):
ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗಾಗಿ ಸರಳಾದೇವಿ ವಿದ್ಯಾರ್ಥಿವೇತನ 2019
ವಿವರ:
 ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಸಮಿತಿ ಈ ಫೆಲೋಶಿಪ್ ನೀಡುತ್ತದೆ. ವಿದೇಶದ ಹೆಸರಾಂತ ಸಂಸ್ಥೆಗಳಲ್ಲಿ, ಆರ್‌ಆ್ಯಂಡ್‌ಡಿ(ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್) ಕೇಂದ್ರಗಳಲ್ಲಿ ಉದಯೋನ್ಮುಖ ಮತ್ತು ಹೆಚ್ಚಿನ ಆದ್ಯತೆಯ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಆಸಕ್ತರು ಅರ್ಜಿ ಸಲ್ಲಿಸಬಹುದು.
ಅರ್ಹತೆ:
ಅನಾಥ, ದೈಹಿಕ ನ್ಯೂನತೆ ಹೊಂದಿರುವ, ಕ್ಯಾನ್ಸರ್ ಪೀಡಿತ, ಸಿಂಗಲ್ ಪೇರೆಂಟ್ ಅಥವಾ ಮರುಕಳಿಸುವ ರೋಗ (ಅಭ್ಯರ್ಥಿ ಅಥವಾ ಹೆತ್ತವರು) ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷ ರೂ. ಮೀರಬಾರದು.
ನೆರವು:
ಅಗತ್ಯದ ನೂರು ವಿದ್ಯಾರ್ಥಿಗಳಿಗೆ 10,000 ರೂ. ನೆರವು ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ:
http://www.b4s.in/bharati/SDS6

******************
ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):

ಸರಳಾದೇವಿ ವಿದ್ಯಾರ್ಥಿವೇತನ 2019
ವಿವರ:
ಪ್ರತಿಭಾವಂತ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸುವ ಉದ್ದೇಶದಿಂದ ಧರ್ಮಪಾಲ ಸತ್ಯಪಾಲ ಚಾರಿಟೇಬಲ್ ಟ್ರಸ್ಟ್ ವಿದ್ಯಾರ್ಥಿವೇತನ ಘೋಷಿಸಿದೆ. ಎಲ್ಲ ವಿಷಯಗಳ ವಿದ್ಯಾರ್ಥಿಗಳೂ ಈ ವಿದ್ಯಾಥಿವೇರ್ತನಕ್ಕೆ ಅರ್ಜಿ ಹಾಕಬಹುದಾಗಿದೆ.
ಅರ್ಹತೆ:
ವಿಜ್ಞಾನ ವಿಭಾಗದಲ್ಲಿ ಹನ್ನೆರಡನೇ ತರಗತಿಯಲ್ಲಿ ಶೇ. 75 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ಯಾವುದೇ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್, ಇಂಜಿನಿಯರಿಂಗ್ ಅಥವಾ ನರ್ಸಿಂಗ್ ಕಲಿಯಲು, ಕಲಾ ವಿಭಾಗದಲ್ಲಿ, ಹನ್ನೆರಡನೇ ತರಗತಿಯಲ್ಲಿ ಕನಿಷ್ಠ ಶೇ.75 ಅಂಕ ಪಡೆದಿದ್ದು ಎಲ್‌ಎಲ್‌ಬಿ, ಮನಃಶಾಸ್ತ್ರ ಅಥವಾ ಸಮೂಹ ಸಂಪರ್ಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಕಾಮರ್ಸ್ ಕಲಿಯುವ ವಿದ್ಯಾರ್ಥಿಗಳು ಹನ್ನೆರಡನೇ ತರಗತಿಯಲ್ಲಿ ಕನಿಷ್ಟ ಶೇ.80 ಅಂಕಗಳನ್ನು ಪಡೆದುಕೊಂಡಿದ್ದು ಸಿಎ, ಸಿಎಸ್ ವ್ಯಾಸಂಗ ಮಾಡಲು ಅರ್ಜಿ ಹಾಕಬಹುದು.
ರಜಾಕಾಲದ ಕೋರ್ಸ್‌ಗಳಿಗೆ, ಶಾಲೆ ತೊರೆದಿರುವ, ಮೆಕ್ಯಾನಿಕ್, ಇಲೆಕ್ಟ್ರಿಶಿಯನ್, ಪ್ಲಂಬರ್, ಗಾರೆ ಕೆಲಸ, ಮರದ ಕೆಲಸ, ಮಾಲಿ ಮತ್ತು ಟೈಲಂರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರು ಅರ್ಜಿ ಹಾಕಬಹುದು.
ಅರ್ಜಿದಾರರ ಕುಟುಂಬದ ವಾರ್ಷಿಕ ಆಾಯ 4.5 ಲಕ್ಷ ರೂ. ಮೀರಬಾರದು.
ನೆರವು:
ವಿಜ್ಞಾನ ಮತ್ತು ಇಂಜಿನಿಯರಿಂಗ್ ಕಲಿಯಲು ಬಯಸುವ ಅಭ್ಯರ್ಥಿಗಳಿಗೆ 75,000ರೂ., ಕಲಾ ವಿಭಾಗದ ವಿದ್ಯಾರ್ಥಿಗಳಿಗೆ 20,000ರೂ., ಮೊದಲ ಹಂತದ ಪರೀಕ್ಷೆ ತೇರ್ಗಡೆ ಹೊಂದಿದ ವಾಣಿಜ್ಯ ಮತ್ತು ಸಿಎ, ಸಿಎಸ್ ವಿದ್ಯಾರ್ಥಿಗಳಿಗೆ 25,000ರೂ. ಮತ್ತು ರಜಾಕಾಲದ ಶಿಕ್ಷಣಕ್ಕೆ 15,000ರೂ. ನೀಡಲಾಗುವುದು. ಅರ್ಜಿದಾರರು ದಿಲ್ಲಿ ಎನ್‌ಸಿಆರ್‌ನ ಯಾವುದೇ ಪರಿಗಣಿತ ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ವರ್ಷದ ಪದವಿ ಶಿಕ್ಷಣ ವ್ಯಾಸಂಗ ಮಾಡುತ್ತಿರಬೇಕು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/SDS5

**********************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):
ಎಂಪವರ್ ಜಾಗತಿಕ ನಾಗರಿಕ
ವಿದ್ಯಾರ್ಥಿವೇತನ-2019
ವಿವರ:
ಎಂಪವರ್ ಜೊತೆ ಒಪ್ಪಂದ ಮಾಡಿಕೊಂಡಿರುವ ಅಮೆರಿಕ ಮತ್ತು ಕೆನಡದಲ್ಲಿರುವ 200ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಎಂಪವರ್ ಫೈನಾನ್ಸಿಂಗ್ ವಿದ್ಯಾರ್ಥಿವೇತನ ಘೋಷಿಸಿದೆ.
ಅರ್ಹತೆ:
ಅರ್ಜಿದಾರರು 18 ವರ್ಷ ಅಥವಾ ಮೇಲ್ಪಟ್ಟವರಾಗಿರಬೇಕು. ಯುಎಸ್ ಅಥವಾ ಕೆನಡದ ಜೊತೆಗಾರಿಕಾ ಕಾಲೇಜು ಅಥವಾ ವಿಶ್ವವಿದ್ಯಾನಿಲಯ ದಲ್ಲಿ ನೋಂದಾಯಿತರಾಗಿರಬೇಕು. ಅಭ್ಯರ್ಥಿಗಳು, ನಿಮ್ಮ ಯುಎಸ್ ಅಥವಾ ಕೆನಡ ಶಿಕ್ಷಣದಿಂದ ಜಗತ್ತಿನಲ್ಲಿ ಯಾವ ಪರಿಣಾಮವನ್ನು ಬೀರಲು ಬಯಸುತ್ತೀರಿ, ಮತ್ತು ನಿಮ್ಮ ಕಾಲೇಜು ಆವರಣದಲ್ಲಿ ಅಂತರ್‌ರಾಷ್ಟ್ರೀಯ ಮತ್ತು ದೇಶೀಯ ವಿದ್ಯಾರ್ಥಿಗಳ ಮಧ್ಯೆ ಒಗ್ಗಟ್ಟು ಮೂಡಲು ಏನು ಮಾಡುವಿರಿ? ಎಂಬ ವಿಷಯದ ಬಗ್ಗೆ 1,000 ಶಬ್ದಗಳ ಪ್ರಬಂಧ ಬರೆಯಬೇಕು.
ನೆರವು:
ಆಯ್ದ ವಿದ್ಯಾರ್ಥಿಗಳಿಗೆ ವಾರ್ಷಿಕ 5,000 ಅಮೆರಿಕನ್ ಡಾಲರ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಎಪ್ರಿಲ್ 15, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/MGC1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News