ಹನೂರು: ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆ

Update: 2019-01-19 05:18 GMT

ಹನೂರು, ಜ. 19: ಕ್ಷೇತ್ರದ ಜೆಡಿಎಸ್ ಮುಖಂಡರು ಸಂಘಟಿತರಾಗಿ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಎದುರಿಸುವ ದಿಸೆಯಲ್ಲಿ ಸೈನಿಕರಂತೆ ಸಜ್ಜಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಣ ತೋಡಿ ಎಂದು ಜೆಡಿಎಸ್ ಮುಖಂಡ ಆರ್.ಮಂಜುನಾಥ್ ತಿಳಿಸಿದರು.

ಹನೂರು ಪಟ್ಟಣದ ಜೆಡಿಎಸ್ ಕಚೇರಿ ಮುಂಭಾಗ ಏರ್ಪಡಿಸಲಾಗಿದ್ದ ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ನಂತರ ಮಾತನಾಡಿದರು.

ಕಳೆದ ವಿಧಾನ ಸಭಾ ಚುನಾವಣೆ ನಂತರ ಕ್ಷೇತ್ರದ ಅನೇಕ ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಕ್ಷೇತ್ರದ ಜನತೆ ನನಗೆ ತೋರುತ್ತಿರುವ ಅಭೂತ ಪೂರ್ವ ಬೆಂಬಲ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಪ್ರವಾಸ ಕೈಗೊಂಡಾಗ ಮೂಲಭೂತ ಸಮಸ್ಯೆಗಳು ಹಾಗೆ ಉಳಿದಿವೆ. ಜಾಗೇರಿ ಗ್ರಾಮದಲ್ಲಿ ಜನರಿಗೆ ವಾಸಿಸಲು ಸ್ಥಳವಿಲ್ಲ. ಸತ್ತೇಗಾಲದಲ್ಲಿ ನೀರಾವರಿ ವ್ಯವಸ್ಥೆಯನ್ನು ಮಾಡಿಲ್ಲ. ದೊಡ್ಡಿಂದುವಾಡಿ, ಲೊಕ್ಕನಹಳ್ಳಿ, ಮಧುವನಹಳ್ಳಿ, ಹೊಂಡರಬಾಳು ಮುಂತಾದ ಗ್ರಾಮಗಳಲ್ಲಿ ವಸತಿ ಸೌಕರ್ಯ ವಂಚಿತರಾಗಿದ್ದಾರೆ. ಮಲೆಮಹದೇಶ್ವರ ಬೆಟ್ಟ, ಗೋಪಿನಾಥ್, ಗ್ರಾ.ಪಂ.ವ್ಯಾಪ್ತಿಯ ಬಹುತೇಕ ಹಾಡಿ ಹಳ್ಳಿಗಳಲ್ಲಿ ಕುಡಿಯುವ ನೀರು, ರಸ್ತೆ ಸೌಕರ್ಯವಿಲ್ಲ. ಕೆಲವೆಡೆ ಪ್ಲೋರಿಡ್ ನೀರನ್ನು ಕುಡಿಯುವ ದುಸ್ಥಿತಿ ಇದೆ. ಆಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತಂದು ಕ್ಷೇತ್ರದ ಅಭಿವೃದ್ಧಿಗೆ ಒತ್ತನ್ನು ನೀಡಲಾಗುವುದು ಎಂದರು.

ಪಪಂ ಮಾಜಿ  ಸದಸ್ಯ ರಾಜಶೇಖರ್ ಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರಿಗೆ 5 ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹುತ್ತೂರು  ಗ್ರಾಪಂ ಅಧ್ಯಕ್ಷ ಬಸವಣ್ಣ ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಪಪಂ ಮಾಜಿ  ಸದಸ್ಯ ರಾಜಶೇಖರ್ ಮೂರ್ತಿ ಜೆಡಿಎಸ್  ರಾಜ್ಯ ಸಂಘಟನಾ ಕಾರ್ಯದರ್ಶಿ ಬಾಬು, ಹನೂರು ಮಂಜೇಶ್, ಜಿ.ಪಂ., ಮಾಜಿ ಸದಸ್ಯ ನಾಗೇಂದ್ರ ಬಾಬು, ಪ.ಪಂ.ಸದಸ್ಯ ಬಸವರಾಜು, ಮುಖಂಡರಾದ ಸಿದ್ದೇಗೌಡ, ಬಸವರಾಜು ಸಿದ್ದಪ್ಪಾಜಿ, ವೆಂಕಟೇಶ ನಾಯ್ಡು, ರಾಜು ನಾಯ್ಡು,  ನಾಗೇಂದ್ರ, ಮುರುಗೇಶ್, ಯರಂಬಾಡಿ ವಸಂತ್, ಹನೂರು ಟೌನ್ ಯುವ ಘಟಕದ ಅಧ್ಯಕ್ಷ ಪ್ರಸನ್ನ ಬಂಕ್‍ಮಹೇಶ್, ಅಮೀನ್, ರಾಜೇಶ್ ಸಿದ್ದಪ್ಪಾಜಿ ಕಿರಣ್, ಜೆಡಿಎಸ್ ಕಾರ್ಯಕರ್ತರು ಮುಖಂಡರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News