ಪೌರತ್ವ ಮಸೂದೆಯಿಂದಾಗಿ ಈಶಾನ್ಯ ಭಾರತ ಹೊತ್ತಿ ಉರಿಯುತ್ತಿದೆ: ಲಾಲದುಹಾವ್ಮಾ

Update: 2019-01-19 15:10 GMT

ಕೋಲ್ಕತಾ,ಜ.19: ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ಇಡೀ ಈಶಾನ್ಯ ಭಾರತವು ಹೊತ್ತಿ ಉರಿಯುತ್ತಿದೆ ಎಂದು ಝೋರಾಂ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ಲಾಲದುಹಾವ್ಮಾ ಅವರು ಶನಿವಾರ ಇಲ್ಲಿ ಹೇಳಿದರು.

ಮಸೂದೆಯು ಶಾಸನವಾದರೆ ಭಾರತವು ಮೊದಲಿನಂತಿರುವುದಿಲ್ಲ. ಹೀಗಾಗಿ ಮಸೂದೆಯನ್ನು ಹಿಂದೆಗೆದುಕೊಳ್ಳುವಂತಾಗಲು ಅಥವಾ ಈಶಾನ್ಯ ರಾಜ್ಯಗಳಿಗೆ ವಿನಾಯಿತಿ ನೀಡುವಂತಾಗಲು ಕೇಂದ್ರದಲ್ಲಿ ಜಾತ್ಯತೀತ ಸರಕಾರವನ್ನು ನಾವು ಬಯಸುತ್ತಿದ್ದೇವೆ ಎಂದು ಪ್ರತಿಪಕ್ಷ ರ್ಯಾಲಿಯಲ್ಲಿ ಮಾತನಾಡಿದ ಅವರು ತಿಳಿಸಿದರು.

ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮದೇ ಆದ ರೀತಿಯಲ್ಲಿ ಇತಿಹಾಸವನ್ನು ಮರಳಿ ಬರೆಯಲು ಹವಣಿಸುತ್ತಿವೆ ಎಂದು ಮಿಝೋರಾಂ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರೂ ಆಗಿರುವ ಲಾಲದುಹಾವ್ಮಾ ಹೇಳಿದರು.

ಈಶಾನ್ಯ ಭಾರತದ ಜನರ ರಕ್ಷಣೆಗಾಗಿ ಕೇಂದ್ರದಲ್ಲಿ ಹೊಸ ಜಾತ್ಯತೀತ ಸರಕಾರವನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News