ಬೆಂಗಳೂರು ಉಪನಗರ ರೈಲು ಯೋಜನೆ: ಸ್ಪಷ್ಟನೆ ಕೋರಿ ರಾಜ್ಯ ಸರಕಾರಕ್ಕೆ ಸಂಸದ ಪಿ.ಸಿ.ಮೋಹನ್ ಪತ್ರ

Update: 2019-01-20 16:03 GMT

ಬೆಂಗಳೂರು, ಜ.20: ಬೆಂಗಳೂರು ಉಪನಗರ ರೈಲು ಯೋಜನೆ ಜಾರಿಗೊಳಿಸುವ ಸಂಬಂಧ ರಾಜ್ಯ ಸರಕಾರವು ಹೊಸ ನಿಬಂಧನೆಗಳನ್ನು ವಿಧಿಸಿರುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ, ಸಂಸದ ಪಿ.ಸಿ.ಮೋಹನ್ ಪತ್ರ ಬರೆದು ಸ್ಪಷ್ಟನೆ ಕೋರಿದ್ದಾರೆ.

ಸರಕಾರವು ಹೊಸ ನಿಬಂಧನೆಗಳನ್ನು ವಿಧಿಸಿರುವುದರಿಂದ ಇಡೀ ಯೋಜನೆಯೇ ಹಳಿ ತಪ್ಪುವ ಅಪಾಯವಿದೆ. ಆದುದರಿಂದ, ನಿಬಂಧನೆಗಳನ್ನು ಹಿಂಪಡೆದು ಮೊದಲು ಈ ಯೋಜನೆಯನ್ನು ಜಾರಿಗೆ ತರಲು ಸರಕಾರ ಆದ್ಯತೆ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿಗೆ ತಾತ್ವಿಕ ಒಪ್ಪಿಗೆ ನೀಡಿದೆ. ಆದರೆ, ಏಕಾಏಕಿ ಯೋಜನೆಯನ್ನು ಜಾರಿಗೊಳಿಸಲು ಸರಕಾರ ಹೊಸದಾಗಿ ನಿಬಂಧನೆಗಳನ್ನು ವಿಧಿಸಿರುವುದಕ್ಕೆ ಕಾರಣವೇನು ಎಂಬುದನ್ನು ನಗರದ ಜನರಿಗೆ ವಿವರಿಸಬೇಕು ಎಂದು ಮೋಹನ್ ಆಗ್ರಹಿಸಿದ್ದಾರೆ.

ಈ ಯೋಜನೆ ಜಾರಿ ಸಂಬಂಧ ವಿಶೇಷ ಉದ್ದೇಶ ಘಟಕ(ಎಸ್‌ಪಿವಿ) ಸ್ಥಾಪಿಸಲು 4-5 ತಿಂಗಳು ವಿಳಂಬವಾಗಿದೆ. ಒಂದು ತಿಂಗಳಲ್ಲಿ ಪ್ರಧಾನಿ ನರೇಂದ್ರಮೋದಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಆದುದರಿಂದ, ಮುಖ್ಯಮಂತ್ರಿಗಳು ಈ ಹೊಸ ನಿಬಂಧನೆಗಳ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News