ಸಾಹಿತ್ಯ ಕ್ಷೇತ್ರಕ್ಕೆ ಆರ್ಯವೈಶ್ಯ ಸಮುದಾಯದ ಕೊಡುಗೆ ಅನನ್ಯ: ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್

Update: 2019-01-20 16:38 GMT

ಬೆಂಗಳೂರು, ಜ.20: ಆರ್ಯವೈಶ್ಯ ಸಮುದಾಯದ ಬಹಳಷ್ಟು ಲೇಖಕರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳಗಿಸಿದ್ದಾರೆ. ಮತ್ತಷ್ಟು ಲೇಖಕರು ಈ ಸಮುದಾಯದಿಂದ ಬರಯವಂತಾಗಲಿ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ತಿಳಿಸಿದ್ದಾರೆ.

ರವಿವಾರ ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ ಮತ್ತು ಧವಳ ಮಹಿಳಾ ವೇದಿಕೆ ನಗರದ ವಾಸವಿ ವಿದ್ಯಾನಿಕೇತನ್ ಭವನದಲ್ಲಿ ಆಯೋಜಿಸಿದ್ದ ಲೇಖಕಿ ಡಾ. ಆರ್.ಇಂದ್ರಾಣಿರವರ ‘ಶ್ರೀ ರಾಮಜಯಂ’, ಅ...ಆ(ಅರವತ್ತು ಆಲೋಚನೆಗಳು) ಹಾಗೂ ‘ಬೃಂದಾವನಂ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆರ್ಯವೈಶ್ಯ ಸಮುದಾಯ ಚಿಕ್ಕ ಅಂಗಡಿಗಳಿಂದ ಪ್ರಾರಂಭಗೊಂಡು ದೊಡ್ಡ ಉದ್ಯಮಿಗಳವರೆಗೆ ವಿಸ್ತರಿಸಿಕೊಂಡಿದ್ದಾರೆ. ಕನ್ನಡ ಪುಸ್ತಕ ಮದ್ರಣ ಕ್ಷೇತ್ರದಲ್ಲಿ ಇವರೆ ಮೊದಲಿಗರು. ಹೀಗಾಗಿ ರಾಜ್ಯಕ್ಕೆ ಆರ್ಯವೈಶ್ಯ ಸಮುದಾಯ ನೀಡಿರುವ ಕೊಡುಗೆಗಳನ್ನು ದಾಖಲಿಸುವಂತಹ ಕೆಲಸವಾಗಲಿ ಎಂದು ಅವರು ಹೇಳಿದರು.

ಆರ್ಯವೈಶ್ಯ ಸಮುದಾಯದ ಲೇಖಕಿ ಡಾ.ಆರ್.ಇಂದ್ರಾಣಿ ನಂದಕುಮಾರ್, ಸಂಸ್ಕೃತದಲ್ಲಿ ಡಾಕ್ಟರೇಟ್ ಮಾಡಿದ ಮೊಲದ ಮಹಿಳೆ. ಕೌಟುಂಬಿಕೆ ಒತ್ತಡಗಳ ನಡುವೆಯೂ ದೂರ ಶಿಕ್ಷಣದ ಮೂಲಕ ವಿದ್ಯಾಭ್ಯಾಸ ಮಾಡಿ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ. ಇವರ ಅನುಭವನ್ನು ಸಮುದಾಯದ ಯುವ ಜನತೆ ಮಾದರಿಯಾಗಲಿ ಎಂದು ಅವರು ಹೇಳಿದರು.

ಲೇಖಕಿ ಡಾ.ಆರ್.ಇಂದ್ರಾಣಿ ನಂದಕುಮಾರ್ ಮಾತನಾಡಿ, ನನಗೆ ಓದಬೇಕೆಂದು ಬಹಳಷ್ಟು ಆಸೆಯಾಗಿತ್ತು. ಆದರೆ, ಮನೆಯವರು ಪದವಿ ಮುಗಿಯುತ್ತಿದ್ದಂತೆ ಮದುವೆ ಮಾಡಿದರು. 20 ವರ್ಷ ಕೌಟುಂಬಿಕ ಜೀವನಕ್ಕೆ ಮೀಸಲಾಯಿತು. ಆ ನಂತರ ಸಂಸ್ಕೃತವನ್ನು ವಿಷಯನ್ನು ದೂರು ಶಿಕ್ಷಣದ ಮೂಲಕ ಕಲಿತು, ಪಿಎಚ್‌ಡಿಯನ್ನು ಮುಗಿಸಿದೆ ಎಂದು ಹೇಳಿದರು.

ಬರೆಯುವ ಹವ್ಯಾಸದಿಂದ ನಾನು ಸಾಕಷ್ಟು ಅನುಭವ, ಜ್ಞಾನವನ್ನು ಪಡೆದೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ನನ್ನ ಲೇಖನ ಪ್ರಕಟಗೊಂಡಾಗ ತುಂಬ ಖುಷಿಗೊಂಡಿದ್ದೇನೆ. ಹೀಗಾಗಿ ಮನಸು ಮಾಡಿದರೆ ಯಾರು ಏನು ಬೇಕಾದರು ಮಾಡಬಹುದು. ಅದಕ್ಕೆ ನಾನು ಉದಾಹರಣೆಯಾಗಿದ್ದೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ನಿರ್ದೇಶಕ ಟಿ.ವಿ.ರಾಜು, ವಿಜಯ ಸಂಜೆ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಶಾಂತರಾಜು, ಲೇಖಕಿ ಡಾ.ಎಸ್.ವಿ.ಸುಜಾತಾ, ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೆ.ಎಲ್.ನಟರಾಜ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News