ಭಾರತ ಮಹಿಳಾ ಫುಟ್ಬಾಲ್ ತಂಡಕ್ಕೆ ಜಯ

Update: 2019-01-21 18:41 GMT

ಹಾಂಕಾಂಗ್, ಜ.21: ಡ್ಯಾಂಗ್ಮೆ ಗ್ರೇಸ್ ಅವರ ಅವಳಿ ಗೋಲುಗಳ ಬಲದಿಂದ ಭಾರತ ಮಹಿಳಾ ಫುಟ್ಬಾಲ್ ತಂಡ ಹಾಂಕಾಂಗ್ ವಿರುದ್ಧ 5-2 ಗೋಲುಗಳ ಅಂತರದ ಮಿಂಚಿನ ಜಯ ಸಾಧಿಸಿದೆ. ಆ ಮೂಲಕ ಹಾಂಕಾಂಗ್ ಪ್ರವಾಸ ಕೈಗೊಂಡಿರುವ ತಂಡಕ್ಕೆ ಸೋಮವಾರ ಶುಭಾರಂಭ ದೊರೆತಿದೆ.

  ಗ್ರೇಸ್ ಆರಂಭದಲ್ಲಿ ಎರಡು ಗೋಲುಗಳನ್ನು ಬಾರಿಸುವ ಮೂಲ ತಂಡದ ಗೆಲುವಿಗೆ ಬುನಾದಿ ಹಾಕಿದರು. ಆ ಬಳಿಕ ಸಂಜು, ಸುಮಿತ್ರಾ ಮತ್ತು ರತನ್‌ಬಾಲಾ ತಲಾ ಒಂದೊಂದು ಗೋಲುಗಳ ಮೂಲಕ ಜಯದ ಸೌಧ ಕಟ್ಟಿದರು. ಇಂದುಮತಿ ಒದಗಿಸಿದ ಪಾಸ್‌ನಿಂದ ಮುನ್ನುಗ್ಗಿದ ಗ್ರೇಸ್ ಭಾರತದ ಪರ ಮೊದಲ ಗೋಲು ಬಾರಿಸಿದರು. 17ನೇ ನಿಮಿಷದಲ್ಲಿ ಹಾಂಕಾಂಕ್ ಪರ ಗೋಲು ಗಳಿಸಿದ ಚೆಂಗ್ ವೈ ಕಿ ಸಮಬಲ ಸಾಧಿಸಿದರು. 5 ನಿಮಿಷದ ಬಳಿಕ ಗ್ರೇಸ್ ಮತ್ತೊಂದು ಮಿಂಚಿನ ಗೋಲು ದಾಖಲಿಸಿದರು. ಆ ಬಳಿಕ ದ್ವಿತೀಯಾರ್ಧದ ಸಮಯದಲ್ಲಿ ಸಂಜು ಭಾರತದ ಪರ ಮತ್ತೊಂದು ಗೋಲು ದಾಖಲಿಸಿ 3-1ರ ಮುನ್ನಡೆ ಒದಗಿಸಿದರು. 70ನೇ ನಿಮಿಷದಲ್ಲಿ ಹಾಂಕಾಂಗ್‌ನ ಚುಂಗ್ ಪುಂಗ್ ಕಿ ಮತ್ತೊಂದು ಗೋಲು ದಾಖಲಿಸಿ ಅಂತರವನ್ನು ತಗ್ಗಿಸಿದರು. ಆನಂತರ ಭಾರತದ ಸುಮಿತ್ರಾ 82ನೇ ನಿಮಿಷ ಹಾಗೂ ರತನ್‌ಬಾಲಾ ಮತ್ತೊಂದು ಗೋಲು ಬಾರಿಸಿದರು.ಇದರೊಂದಿಗೆ ಭಾರತ ತಂಡ 5-2ರಿಂದ ಪಂದ್ಯ ಜಯಿಸಿ ಬೀಗಿತು. ಭಾರತ ತನ್ನ ಮುಂದಿನ ಪಂದ್ಯವನ್ನು ಹಾಂಕಾಂಗ್ ವಿರುದ್ಧವೇ ಬುಧವಾರ ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News