ಸಿದ್ದಗಂಗಾ ಮಠಕ್ಕೆ ಸಿದ್ದಲಿಂಗ ಶ್ರೀ ಉತ್ತರಾಧಿಕಾರಿ

Update: 2019-01-22 06:09 GMT

ತುಮಕೂರು, ಜ.22: ಡಾ.ಶಿವಕುಮಾರ ಸ್ವಾಮೀಜಿ  ಅವರು   ಬದುಕಿರುವಾಗಲೇ ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ತನ್ನ ಶಿಷ್ಯ,  ಕಿರಿಯ ಸ್ವಾಮಿ ಸಿದ್ದಲಿಂಗ ಶ್ರೀಗಳನ್ನು   ನೇಮಕ ಮಾಡಿದ್ದರು. ಇದರಿಂದಾಗಿ ಶಿವಕುಮಾರ್ ಸ್ವಾಮೀಜಿ  ಬಳಿಕ ಅವರ ಸ್ಥಾನವನ್ನಲಂಕರಿಸುವವರು  ಯಾರು ಎಂಬ ಗೊಂದಲಕ್ಕೆ ಅವಕಾಶ ಇಲ್ಲ.

ಸಿದ್ದಗಂಗಾ ಮಠದ ಕಿರಿಯ ಶ್ರೀ  ಸಿದ್ದಲಿಂಗ ಸ್ವಾಮೀಜಿ  ನೇತೃತ್ವದಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ  ಕ್ರಿಯಾ ಸಮಾಧಿ ಕಾರ್ಯಗಳು ಮಂಗಳವಾರ ಸಂಜೆ ನಡೆಯಲಿದೆ. .

ಡಾ.ಶಿವಕುಮಾರ್ ಸ್ವಾಮೀಜಿ  ಅವರು ಬದುಕಿರುವಾಗಲೇ ಮಠದ ಎಲ್ಲ ಅಧಿಕಾರವನ್ನು ತಮ್ಮ ಉತ್ತರಾಧಿಕಾರಿಗೆ ಹಸ್ತಾಂತರಿಸಿದ್ದರು. ಸಿದ್ದಲಿಂಗ ಶ್ರೀಗಳು ಮೂಲತ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಂಡೆಕಂಚುಕಲ್ ಗ್ರಾಮದವರು. ಶಿಕ್ಷಕ ಸದಾಶಿವಯ್ಯ ಮತ್ತು ಸದಾಶಿವಮ್ಮ ದಂಪತಿ ಪುತ್ರ. ಅವರ ಪೂರ್ವಾಶ್ರಮದ ಹೆಸರು ವಿಶ್ವನಾಥ. ಸಂಸ್ಕೃತ ವಿದ್ವಾನ್ ಮತ್ತು ಸ್ನಾತಕೋತ್ತರ ಪದವೀಧರರು.
 ಸಿದ್ಧಲಿಂಗ ಸ್ವಾಮಿ ಅವರನ್ನು  ಮಾರ್ಚ್ 31,  1998ರಲ್ಲಿ  ಡಾ. ಶಿವಕುಮಾರ ಸ್ವಾಮೀಜಿ ತಮ್ಮ ಶಿಷ್ಯರನ್ನಾಗಿ ಸ್ವೀಕಾರ ಮಾಡಿದ್ದರು. ಆಗಸ್ಟ್ 4, 2011ರಲ್ಲಿ ಸಿದ್ದಲಿಂಗ ಮಠಕ್ಕೆ ಸಿದ್ದಲಿಂಗ ಶ್ರೀಗಳನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅಂದಿನಿಂದ ಮಠದ ಸಂಪೂರ್ಣ  ಉಸ್ತುವಾರಿಯನ್ನು ಅವರು ನೋಡಿಕೊಳ್ಳುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News