ಫ್ಲೋರಿಡಾ ಬ್ಯಾಂಕಿನಲ್ಲಿ ಗುಂಡಿನ ದಾಳಿ: ಕನಿಷ್ಠ ಐವರು ಬಲಿ

Update: 2019-01-24 03:35 GMT

ಫ್ಲೋರಿಡಾ, ಜ.24: ಸೆಂಟ್ರಲ್ ಫ್ಲೋರಿಡಾ ಟೌನ್‌ನ ಬ್ಯಾಂಕ್ ಒಂದರಲ್ಲಿ ಆಗಂತುಕನೊಬ್ಬ ಹಠಾತ್ತನೇ ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ ಕನಿಷ್ಠ ಐದು ಮಂದಿ ಬಲಿಯಾಗಿದ್ದಾರೆ. ಶಂಕಿತ ದಾಳಿಕೋರ ಪೊಲೀಸ್ ವಶದಲ್ಲಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಝೆಪನ್ ಕ್ಸವೇರ್ (21) ಎಂಬ ಯುವಕ ಸೆಬ್ರಿಂಗ್‌ನ ಸನ್ ಟ್ರಸ್ಟ್ ಬ್ಯಾಂಕಿನ ಒಳಗೆ ನುಗ್ಗಿ ದಾಳಿ ಆರಂಭಿಸಿದ ಎಂದು ಪೊಲೀಸ್ ಮುಖ್ಯಸ್ಥ ಕರ್ಲ್ ಹೊಗ್ಲಾಂಡ್ ತಿಳಿಸಿದ್ದಾರೆ. ಆರೋಪಿ ಯುವಕ ತಾನೇ ಪೊಲೀಸರನ್ನು ಕರೆದು ಬ್ಯಾಂಕಿನ ಒಳಗೆ ದಾಳಿ ಮಾಡಿದ್ದನ್ನು ಒಪ್ಪಿಕೊಂಡಿದ್ದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಯುವಕನನ್ನು ಬ್ಯಾಂಕಿನಿಂದ ಹೊರಗೆ ಹೋಗುವಂತೆ ಮನವೊಲಿಸುವಲ್ಲಿ ಮಧ್ಯಸ್ಥಿಕೆಗಾರರು ವಿಫಲವಾದ ಬಳಿಕ, ಹೈಲ್ಯಾಂಡ್ಸ್ ಕೌಂಟಿ ಶೆರೀಫ್ ಕಚೇರಿಯ ಎಸ್‌ಡಬ್ಲ್ಯುಎಟಿ ತಂಡ ಕಟ್ಟಡಕ್ಕೆ ಪ್ರವೇಶಿಸಿ, ದಾಳಿಕೋರನ ಜತೆ ಮಾತುಕತೆ ನಡೆಸಿತು. ಕೊನೆಗೆ ಆತ ಪೊಲೀಸರಿಗೆ ಶರಣಾದ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News