ವಾಟ್ಸ್ಯಾಪ್, ಇನ್‌ಸ್ಟಾಗ್ರಾಂ, ಮೆಸೆಂಜರ್ ಚಾಟ್ ಆ್ಯಪ್ ಸಮನ್ವಯಕ್ಕೆ ಫೇಸ್‌ಬುಕ್ ಚಿಂತನೆ

Update: 2019-01-26 04:02 GMT

ವಾಷಿಂಗ್ಟನ್, ಜ.26: ವಾಟ್ಸ್ಯಾಪ್, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಮೆಸೆಂಜರ್ ಚಾಟ್ ಆ್ಯಪ್ ಸಮನ್ವಯಗೊಳಿಸಲು ಫೇಸ್‌ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ಯೋಜನೆ ರೂಪಿಸಿದ್ದಾರೆ. ಈ ಕ್ರೋಢೀಕೃತ ಮೆಸೆಂಜರ್ ಆ್ಯಪ್‌ಗೆ ಎಂಡ್ ಟೂ ಎಂಡ್ ಎನ್‌ಕ್ರಿಪ್ಷನ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಆದರೆ ಈ ಮೂರೂ ಸೇವೆಗಳೂ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳಲಿವೆ. ಇದನ್ನು ಸಮನ್ವಯಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಾಲ್ವರ ಹೇಳಿಕೆಗಳನ್ನು ವರದಿ ಉಲ್ಲೇಖಿಸಿದೆ. ಆದರೆ ಈ ಕಾರ್ಯ ಇನ್ನೂ ಆರಂಭಿಕ ಹಂತದಲ್ಲಿದ್ದು, 2020ರ ಆರಂಭಕ್ಕೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲು ಫೇಸ್‌ಬುಕ್ ನಿರಾಕರಿಸಿದೆ.

ಇದಾದ ಬಳಿಕ ಫೇಸ್‌ಬುಕ್ ಬಳಕೆದಾರ, ಕೇವಲ ವಾಟ್ಸ್ಯಾಪ್ ಖಾತೆ ಹೊಂದಿರುವವರಿಗೆ ಕೂಡಾ ಎನ್‌ಕ್ರಿಪ್ಟೆಡ್ ಮೆಸೇಜ್ ಕಳುಹಿಸಲು ಅವಕಾಶವಾಗಲಿದೆ. ಎನ್‌ಕ್ರಿಪ್ಷನ್ ಎಂದರೆ ಸಂದೇಶ ರವಾನಿಸಿದ ವ್ಯಕ್ತಿ ಮತ್ತು ಸಂದೇಶ ಸ್ವೀಕರಿಸುವ ವ್ಯಕ್ತಿಗಳಷ್ಟೇ ಈ ಸಂದೇಶಗಳನ್ನು ನೋಡಲು ಸಾಧ್ಯವಿರುವ ವಿಧಾನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News