ಗಂಗಮ್ಮ ದೇವಸ್ಥಾನ ವಿಷ ಪ್ರಸಾದ ದುರಂತ ಪ್ರಕರಣ; ಶವ ಕೊಂಡೊಯ್ಯಲು ಹಣವಿಲ್ಲದೆ ಮೃತ ಸರಸ್ವತಮ್ಮ ಸಂಬಂಧಿಕರ ಪರದಾಟ

Update: 2019-01-27 07:24 GMT

ಕೋಲಾರ, ಜ.27: ಗಂಗಮ್ಮ ದೇವಸ್ಥಾನದ ಪ್ರಸಾದ ಸೇವಿಸಿ ಮೃತಪಟ್ಟ ಮಹಿಳೆ ಸರಸ್ವತಮ್ಮ ಅವರ ಮೃತದೇಹವನ್ನು ಕೊಂಡೊಯ್ಯಲು ಹಣವಿಲ್ಲದೆ ಆಕೆಯ ಸಂಬಂಧಿಕರು ಪರದಾಡುತ್ತಿರುವ ಘಟನೆ ವರದಿಯಾಗಿದೆ.

ಶಿಡ್ಲಘಟ್ಟ ತಾಲೂಕು ಗಡಿಮಂಚೇನಹಳ್ಳಿಯ ಸರಸ್ವತಮ್ಮ ವಿಷ ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಸರಸ್ವತಮ್ಮ  ಅವರಿಗೆ ನೀಡಲಾದ ಚಿಕಿತ್ಸೆಗೆ ಬಗ್ಗೆ ಆಸ್ಪತ್ರೆಯ ಬಿಲ್ ಪಾವತಿಸಲು  ಅವರ ಸಂಬಂಧಿಕರಿಗೆ   ಸಾಧ್ಯವಾಗಲಿಲ್ಲ .  ಆಸ್ಪತ್ರೆಯ ಬಿಲ್ ಪಾವತಿಸದ ಕಾರಣದಿಂದಾಗಿ ಶವವನ್ನು ಹಸ್ತಾಂತರಿಸಲು ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದಾರೆ. ಈ ಕಾರಣದಿಂದಾಗಿ ಮೃತ ಸರಸ್ವತಮ್ಮ ಸಂಬಂಧಿಕರು ಆಸ್ಪತ್ರೆಯ ಮುಂದೆ ಕಣ್ಣೀರು ಹಾಕುತ್ತಿದ್ದಾರೆಂದು ತಿಳಿದು ಬಂದಿದೆ.

 ವಿಷ ಪ್ರಸಾದ್ ಸೇವಿಸಿ  ಶಿಡ್ಲಘಟ್ಟ ತಾಲೂಕು ಗಡಿಮಂಚೇನಹಳ್ಳಿಯ ಸರಸ್ವತಮ್ಮ(56) ಮತ್ತು   ಕವಿತಾ (28), ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡಿರುವ  9 ಮಂದಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಪೈಕಿ 4 ಮಂದಿಯ ಸ್ಥಿತಿ ಗಂಭೀರವಾಗಿದೆ ಒಂದೇ ಕುಟುಂಬದ ಗಂಗಾಧರ, ಗಾನವಿ, ಚರಣ್ ನಾರಾಯಣಮ್ಮ ಮತ್ತು ವೆಂಕಟರಮಣಪ್ಪ ಸ್ಥಿತಿ ಗಂಭೀರವಾಗಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News