ಶೇ. 90 ಜನರಿಗೆ 2 ರೂಪಾಯಿಗೆ ಅಕ್ಕಿ: ಮಮತಾ ಬ್ಯಾನರ್ಜಿ

Update: 2019-01-27 17:13 GMT

ಕೋಲ್ಕತ್ತಾ, ಜ. 28: ರಾಜ್ಯದಲ್ಲಿ ಕನಿಷ್ಠ ಶೇ. 90 ಜನರು 2 ರೂಪಾಯಿಗೆ ಪ್ರತಿ ಕೆ.ಜಿ. ಅಕ್ಕಿ ಪಡೆಯುತ್ತಿದ್ದಾರೆ ಎಂದು ಪಶ್ಚಿಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ಖಾದ್ಯ ಸಾಥಿ ದಿವಸ್’ನಲ್ಲಿ ಮಾತನಾಡಿದ ಬ್ಯಾನರ್ಜಿ, ಜಂಗಲ್‌ಮಹಲ್, ಬೆಟ್ಟ ಪ್ರದೇಶಗಳು, ಚಹಾ ತೋಟದ ಕಾರ್ಮಿಕರು ಹಾಗೂ ಟೋಟೋ ಬುಡಕಟ್ಟು ಜನರೊಂದಿಗೆ ಸಿಂಗೂರಿನ ರೈತರನ್ನು ಒಳಗೊಂಡಂತೆ ಐಲಾ ಸಂತ್ರಸ್ತ ಪ್ರದೇಶಗಳಿಗೆ ಸರಕಾರ ವಿಶೇಷ ನೆರವು ನೀಡಿದೆ ಎಂದರು. ಖಾದ್ಯ ಸಾಥಿ ಯೋಜನೆಯನ್ನು ಮಮತಾ ಬ್ಯಾನರ್ಜಿ ಅವರು 2016 ಜನವರಿ 27ರಂದು ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News