ಈಕೆ 30 ಮಕ್ಕಳ ತಾಯಿ ಎಂದರೆ ನೀವು ನಂಬುತ್ತೀರಾ ?

Update: 2019-01-29 04:16 GMT

ಭೋಪಾಲ್, ಜ. 29: ಮಧ್ಯಪ್ರದೇಶದ ಸೂಪರ್ ತಾಯಿ ಎನಿಸಿಕೊಂಡಿರುವ ಈಕೆಯ ಹೆಸರು ಕಾಲರ್‌ ವಾಲಿ. ಈ ಅಸಾಧಾರಣ ತಾಯಿ ಮತ್ತೆ ನಾಲ್ಕು ಮರಿಗಳಿಗೆ ಜನ್ಮ ನೀಡುವ ಮೂಲಕ 30 ಮರಿಗಳನ್ನು ಹೆತ್ತ ವಿಶಿಷ್ಟ ದಾಖಲೆ ಸ್ಥಾಪಿಸಿದ್ದಾಳೆ.

ಎಂಟನೇ ಬಾರಿಗೆ ಈ ಹುಲಿ ಮರಿ ಹಾಕಿದ್ದು, ಒಟ್ಟು 30 ಮರಿಗಳಿಗೆ ಜನ್ಮ ನೀಡುವ ಮೂಲಕ ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಮರಿಹಾಕಿದ ಹುಲಿ ಎಂಬ ದಾಖಲೆ ನಿರ್ಮಿಸಿದೆ. ಕಳೆದ ಕೆಲ ತಿಂಗಳಲ್ಲಿ 28 ಹುಲಿಗಳನ್ನು ಕಳೆದುಕೊಂಡಿರುವ ಈ ರಾಜ್ಯದಲ್ಲಿ ಹುಲಿ ಸಮೃದ್ಧಿ ಯೋಜನೆಗೆ ಕಾಲರ್‌ ವಾಲಿ ಗಣನೀಯ ಕೊಡುಗೆ ನೀಡಿದೆ.

"ಈ ಹೆಣ್ಣುಹುಲಿ ನಾಲ್ಕು ಮರಿಗಳ ಜತೆ ಇರುವುದನ್ನು ಪ್ರವಾಸಿಗರು ಇತ್ತೀಚೆಗೆ ಪತ್ತೆ ಮಾಡಿದ್ದರು. ಇವು ತೀರಾ ಚಿಕ್ಕ ಮರಿಗಳಾಗಿದ್ದು, ಆರೋಗ್ಯವಂತ ಮರಿಗಳಾಗಿವೆ" ಎಂದು ಅರಣ್ಯಾಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಪೆಂಚ್‌ ರಾಣಿ ಎಂದೇ ಖ್ಯಾತಳಾಗಿರುವ ಕಾಲರ್‌ ವಾಲಿ, ಬಿಬಿಸಿ ನೆಟ್‌ವರ್ಕ್ ಸಿದ್ಧಪಡಿಸಿದ ಖ್ಯಾತ ಸಾಕ್ಷ್ಯಚಿತ್ರ, "ಸ್ಪೈ ಇನ್ ದಿ ಜಂಗಲ್"ನಲ್ಲಿ ಪ್ರಧಾನ ಪಾತ್ರದಲ್ಲಿರುವ ಖ್ಯಾತ ಬರಿಮಡ ಹುಲಿಯ ನಾಲ್ಕು ಮರಿಗಳಲ್ಲಿ ಒಂದು. ತಾಯಿಯ ಸಾಮ್ರಾಜ್ಯದಲ್ಲಿ ತನ್ನ ಪ್ರದೇಶವನ್ನು ಕಂಡುಕೊಂಡಿರುವ ನಾಲ್ಕು ಮರಿಗಳಲ್ಲಿ ಕಾಲರ್‌ ವಾಲಿ ಕೂಡಾ ಒಬ್ಬಳು.

2008ರ ಮೇ ತಿಂಗಳಲ್ಲಿ ಈಕೆ ಮೂರು ಮರಿಗಳಿಗೆ ಜನ್ಮ ನೀಡಿದ್ದಳು. ಆದರೆ ಚೊಚ್ಚಲ ಹೆರಿಗೆ ಕಾರಣದಿಂದಾಗಿ ಕಠಿಣವಾದ ಹವಾಮಾನ ಕಾರಣದಿಂದ ಮರಿಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 24 ದಿನಗಳಲ್ಲಿ ನ್ಯುಮೋನಿಯಾಗೆ ತುತ್ತಾಗಿ ಸಾವನ್ನಪ್ಪಿದ್ದವು ಎಂದು ಅಧಿಕಾರಿಯೊಬ್ಬರು ನೆನಪಿಸಿಕೊಳ್ಳುತ್ತಾರೆ. 2008ರಲ್ಲಿ ಮೂರು ಗಂಡುಮರಿ ಸೇರಿದಂತೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. 13 ಬೇರೆ ಬೇರೆ ಕಡೆಗಳಲ್ಲಿ ಮರಿಗಳನ್ನು ಬೆಳೆಸಿ ರಕ್ಷಿಸಿ, ಎಲ್ಲ ಮರಿಗಳು ಉಳಿದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News