​ವಾಮಾಚಾರ ಶಂಕೆಯಿಂದ ಮಹಿಳೆ, ನಾಲ್ವರು ಮಕ್ಕಳ ಹತ್ಯೆ: ಆರೋಪಿಗಳ ಬಂಧನ

Update: 2019-01-29 04:41 GMT

ಭೋಪಾಲ್, ಜ. 29: ಬುಡಕಟ್ಟು ಪ್ರಾಬಲ್ಯದ ಸುಂದರಗಢ ಜಿಲ್ಲೆಯಲ್ಲಿ ವಾಮಾಚಾರ ಶಂಕೆಯಿಂದ ಮಹಿಳೆ ಹಾಗೂ ಆಕೆಯ ನಾಲ್ವರು ಮಕ್ಕಳನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಇಂದುಪುರ ಗ್ರಾಮದ ಕೊಯ್ಡಾ ಠಾಣೆಯ ಪಿಎಸ್‌ಐ ಸುಶಾಂತ್ ದಾಸ್ ಈ ಬಗ್ಗೆ ಮಾಹಿತಿ ನೀಡಿ, ಪ್ರಮುಖ ಆರೋಪಿ ಬುಧರಾಮ್ ಮಾಟ ವೈದ್ಯ ಎಂದು ಕರೆದುಕೊಂಡಿದ್ದಾನೆ. ಇತರ ಆರೋಪಿಗಳಲ್ಲಿ ಸ್ಥಳೀಯ ದೇಬ್ರಾ ಮುಂಡಾ ಹಾಗೂ ಆತನ ನಾಲ್ವರು ಭಾವಂದಿರು ಸೇರಿದ್ದಾರೆ.

ಮಂಗ್ರಿ ಮುಂಡಾ ಎಂಬ ಮಹಿಳೆ ಹಾಗೂ ಇಬ್ಬರು ಪುತ್ರರು, ಪುತ್ರಿಯರನ್ನು ಹತ್ಯೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಚಾಲಕ ಸುಧಾಮ ಮುಂಡಾ ಎಂಬವರ ಮನೆಗೆ ಜ.25ರಂದು ತೆರಳಿದ ಆರೋಪಿಗಳು ಆತ ಮನೆಯಲ್ಲಿ ಇಲ್ಲದಾಗ ಈ ಕೃತ್ಯ ಎಸಗಿದ್ದರು ಎಂದು ಆಪಾದಿಸಲಾಗಿದೆ.

ಮಂಗ್ರಿ ತನ್ನ ಕುಟುಂಬಕ್ಕೆ ಮಾಟ ಮಾಡಿದ್ದಾಳೆ ಎಂಬ ಶಂಕೆಯಿಂದ ಬುಧರಾಮ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕುಟುಂಬದ ಸುಧೀರ್ಘ ಕಾಯಿಲೆಗೆ ಈ ಮಾಟವೇ ಕಾರಣ ಎಂದು ಈತ ಶಂಕಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News