ಮಾಜಿ ಕೇಂದ್ರ ಸಚಿವ ಫರ್ನಾಂಡಿಸ್ ನನಗೆ ಸಂಗಾತಿಯಾಗಿದ್ದರು: ಸಿದ್ದರಾಮಯ್ಯ

Update: 2019-01-29 07:16 GMT

ಮೈಸೂರು, ಜ.29: ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಜಾರ್ಜ್ ಫರ್ನಾಂಡಿಸ್ ನಿಧನದಿಂದ ನಾನು  ಆಘಾತಕ್ಕೀಡಾಗಿದ್ದೇನೆ. ಸಮಾಜವಾದಿ ಚಳುವಳಿಯ ನೇತಾರರಾಗಿದ್ದ ಜಾರ್ಜ್ ನನಗೆ ರಾಜಕೀಯ ಸಂಗಾತಿಯಾಗಿದ್ದರು ಎಂದು ಹೇಳಿದ್ದಾರೆ. ಜಾರ್ಜ್ ಫರ್ನಾಂಡಿಸ್ ಹಿರಿಯಣ್ಣನಂತೆ ನನಗೆ  ಮಾರ್ಗದರ್ಶಕರಾಗಿದ್ದರು. ಅವರನ್ನು ಕಳೆದುಕೊಂಡ ದು:ಖ ಮಾಯುವಂತಹದ್ದಲ್ಲ. ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ  ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಎಸ್ ವೈ ಸಂತಾಪ : ಮಾಜಿ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫರ್ನಾಂಡೀಸ್ ಅವರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ. ಕಾರ್ಮಿಕರು, ಶೋಷಿತರ ಧ್ವನಿಯಾಗಿದ್ದ ಇವರು, ಸರಳತೆಯಿಂದಲೇ ಜನಮನ ಗೆದ್ದಿದ್ದರು. ದೇಶ ಒಬ್ಬ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಿದೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ. ಇವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್ .ಯಡಿಯೂರಪ್ಪ ಹೇಳಿದ್ದಾರೆ.

ಡಿವಿಎಸ್ : ಕರ್ನಾಟಕದಲ್ಲಿ ಹುಟ್ಟಿ , ಮುಂಬೈನ ಶೋಷಿತ ಕಾರ್ಮಿಕ ಹೋರಾಟದಲ್ಲಿ ತನ್ನ ಛಾಪು ಮೂಡಿಸಿ , ದೇಶಾದ್ಯಂತ ಹೆಸರು ವಾಸಿಯಾಗಿ , ರೈಲ್ವೆ , ರಕ್ಷಣಾ ಸಚಿವರಾಗಿ ತನ್ನ ಕಾರ್ಯ ನಿರ್ವಹಿಸಿದ್ದ ಜಾರ್ಜ್ ಫೆರ್ನಾಂಡೀಸ್ ರವರು ಇಹಲೋಕ ತ್ಯಜಿಸಿದ್ದು ದುಃಖಕರ . ಇವರ ಅಗಲುವಿಕೆಯಿಂದ ದೇಶ ರಾಜಕಾರಣದ ಹಿರಿಯ ಕೊಂಡಿಯೊಂದು ಕಳಿಚಿದಂತಾಗಿದೆ ಎಂದು  ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News