ರಮೇಶ್ ಜಾರಕಿಹೊಳಿ ಆಪ್ತರ ಮನೆ ಮೇಲೆ ಐಟಿ ದಾಳಿ ?

Update: 2019-01-29 14:39 GMT

ಬೆಂಗಳೂರು, ಜ.29: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತರು ಎನ್ನಲಾದ ಕೆಲವರ ಮನೆ ಮೇಲೆ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಗೋಕಾಕ್ ತಾಲೂಕಿನ 9 ಗ್ರಾಮಗಳಲ್ಲಿ 165 ಜನರಿಗೆ ಐಟಿಯಿಂದ ನೋಟಿಸ್ ಜಾರಿ ಮಾಡಿದ್ದು, ಸೋಮವಾರ ರಾತ್ರಿ ಸ್ಥಳೀಯ ಮುಖಂಡರು ಊರು ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಗುಜನಾಳ, ಅಕ್ಕತಂಗೇರಹಾಳ್, ಅಂಕಲಗಿ, ಮದವಾಲ, ದಾಸನಟ್ಟಿ, ಕುಂದರಗಿ, ಮಲ್ಲಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಶಾಸಕರ ಬೆಂಬಲಿಗರ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು 1500 ಎಕರೆ ಜಮೀನು, 200ಕ್ಕೂ ಹೆಚ್ಚು ಟ್ರ್ಯಾಕ್ಟರ್ ಸೇರಿದಂತೆ ಆಸ್ತಿ ದಾಖಲಾತಿಗಳ ಬಗ್ಗೆ ವಿಷಯ ಕಲೆ ಹಾಕಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News