ಶಾರುಕ್ ಖಾನ್ ಬೇನಾಮಿ ಆಸ್ತಿ ಹೊಂದಿದ್ದಾರೆಂಬ ಐಟಿ ಇಲಾಖೆ ಆರೋಪ ‘ಆಧಾರರಹಿತ’: ಮೇಲ್ಮನವಿ ನ್ಯಾಯಾಲಯ

Update: 2019-01-29 18:30 GMT

ಹೊಸದಿಲ್ಲಿ,ಜ.29: ಮಹಾರಾಷ್ಟ್ರದ ಅಲಿಬಾಗ್‌ನ ಬೀಚ್ ಪಟ್ಟಣದಲ್ಲಿ ನಟ ಶಾರುಕ್ ಖಾನ್ ಬೇನಾಮಿ ಆಸ್ತಿಯನ್ನು ಹೊಂದಿದ್ದಾರೆ ಎಂಬ ಆರೋಪವನ್ನು ಮೇಲ್ಮನವಿ ನ್ಯಾಯಾಲಯ ರದ್ದುಗೊಳಿಸಿದೆ. ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಜಪ್ತಿ ಆದೇಶ ಆಧಾರರಹಿತ ಮತ್ತು ಉತ್ಪ್ರೇಕ್ಷಿಸಲ್ಪಟ್ಟಿದೆ ಎಂದು ನ್ಯಾಯಾಲಯ ತಿಳಿಸಿದೆ.

ಶಾರುಕ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಮತ್ತು ಆಕೆಯ ಹೆತ್ತವರು ಶೇರುದಾರರಾಗಿರುವ ಕಂಪೆನಿಯ ವಿರುದ್ಧ ಆದೇಶವನ್ನು ಹೊರಡಿಸಿರುವ ಆದಾಯ ತೆರಿಗೆ ಇಲಾಖೆಯನ್ನು ಮೇಲ್ಮನವಿ ನ್ಯಾಯಾಲಯ (ಎಎ) ತರಾಟೆಗೆ ತೆಗೆದುಕೊಂಡಿದೆ. ತೆರಿಗೆ ಇಲಾಖೆ ತಿಳಿಸಿರುವ ಅಲಿಬಾಗ್ ತಾಲೂಕದ ಥಾಲ್ ಗ್ರಾಮದ ಕೃಷಿ ಭೂಮಿ ಮತ್ತು ಅದರಲ್ಲಿರುವ ಕಟ್ಟಡ ಬೇನಾಮಿ ಆಸ್ತಿ ಅಲ್ಲ ಎಂದು ನಾವು ತೀರ್ಪು ನೀಡುತ್ತಿದ್ದು ಆಮೂಲಕ ತನಿಖಾ ಅಧಿಕಾರಿ ನೀಡಿರುವ ಜಪ್ತಿ ಆದೇಶವನ್ನು ನಾವು ರದ್ದು ಮಾಡುತ್ತಿದ್ದೇವೆ ಎಂದು ತೀರ್ಪು ಪ್ರಾಧಿಕಾರದ ಡಿ ಸಂಘೈ (ಮುಖ್ಯಸ್ಥ) ಮತ್ತು ತುಶಾರ್ ವಿ. ಶಾ (ಸದಸ್ಯ, ಕಾನೂನು) ಅವರ ವಿಭಾಗೀಯ ಪೀಠ ತಿಳಿಸಿದೆ.

ಅಲಿಬಾಗ್‌ನ ಕೃಷಿ ಭೂಮಿಯಲ್ಲಿ ನಿರ್ಮಿಸಲಾಗಿರುವ ಹದಿನೈದು ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್ ಮತ್ತು ಜಮೀನನ್ನು ಜಪ್ತಿ ಮಾಡಲು ಆದೇಶ ನೀಡಿದ್ದ ತೆರಿಗೆ ಇಲಾಖೆ ದೇಜಾವೂ ಫಾರ್ಮ್ಸ್ ಪ್ರೈ.ಲಿ. ಕಂಪೆನಿಯನ್ನು ಬೇನಾಮ್ದಾರ್ ಮತ್ತು ಶಾರೂಕ್ ಖಾನ್‌ರನ್ನು ಅದರ ಫಲಾನುಭವಿ ಎಂದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News