ಬಾಡಿಗೆ ಬಾಕಿ: ಜೆಟ್ ಏರ್‌ವೇಸ್‌ನ ಮೂರು ವಿಮಾನಗಳು ಸ್ಥಗಿತ

Update: 2019-01-29 17:42 GMT

ಹೊಸದಿಲ್ಲಿ,ಜ.29: ಕಳೆದ ಕೆಲವು ತಿಂಗಳುಗಳಿಂದ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಜೆಟ್ ಏರ್‌ವೇಸ್ ಬಾಡಿಗೆ ಬಾಕಿಯನ್ನು ಪಾವತಿಸಲಾಗದೆ ಮಂಗಳವಾರ ತನ್ನ ಮೂರು ಬೋಯಿಂಗ್ 737 ವಿಮಾನಗಳ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದು,ಇದರಿಂದಾಗಿ ಸುಮಾರು 20 ದೇಶಿಯ ಯಾನಗಳು ರದ್ದುಗೊಂಡಿದ್ದವು.

ಮಂಗಳವಾರದ ಈ ಬೆಳವಣಿಗೆಯಿಂದಾಗಿ ಜೆಟ್ ಏರ್‌ವೇಸ್ ಬಾಡಿಗೆಯನ್ನು ಪಾವತಿಸಲಾಗದೆ ಕಳೆದೆರಡು ದಿನಗಳಲ್ಲಿ ಸ್ಥಗಿತಗೊಳಿಸಿರುವ ವಿಮಾನಗಳ ಸಂಖ್ಯೆ ಆರಕ್ಕೇರಿದೆ.

ಸಂಸ್ಥೆಯು ಈಗ ತನ್ನ ಪಾಲುದಾರ ಇತ್ತಿಹಾದ್ ವಿಮಾನ ಸಂಸ್ಥೆಯೊಂದಿಗೆ ಹೆಚ್ಚುವರಿ ಹಣಕಾಸು ಕೋರಿ ಮಾತುಕತೆಗಳನ್ನು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News