ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-02-01 18:32 GMT

ವಿದ್ಯಾರ್ಥಿವೇತನ
(ಆದಾಯ ಮತ್ತು ಅರ್ಹತೆ
ಆಧಾರಿತ):

ಭಾರತ ಕಾಲೇಜು ಮಂಡಳಿ
ವಿದ್ಯಾರ್ಥಿಗಳ ಯೋಜನೆ
ವಿವರ:
 ಸಮಾಜದ ಸೌಲಭ್ಯವಂಚಿತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಹತ್ತು ಜೊತೆಗಾರಿಕೆ ವಿಶ್ವವಿದ್ಯಾನಿಲಯಗಳಲ್ಲಿ ಯಾವುದೇ ಒಂದರಲ್ಲಿ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ ನೀಡುತ್ತಿದೆ. 12ನೇ ತರಗತಿ ವಿದ್ಯಾರ್ಥಿಗಳು ಮಾರ್ಚ್ 2019ರಲ್ಲಿ ಎಸ್‌ಎಟಿ ಪರೀಕ್ಷೆಗೆ ಹಾಜರಾಗಬೇಕು.
ಅರ್ಹತೆ:
ಕುಟುಂಬದ ವಾರ್ಷಿಕ ಆದಾಯ ಆರು ಲಕ್ಷ ರೂ.ಗೂ ಕಡಿಮೆ ಇರುವ ಹನ್ನೆರಡನೇ ತರಗತಿಯಲ್ಲಿ ಕಲಿಯುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.
ನೆರವು:
 ವಾರ್ಷಿಕ ಆರು ಲಕ್ಷ ರೂ.ಗೂ ಕಡಿಮೆ ಆದಾಯ ಹೊಂದಿರುವ 12ನೇ ತರಗತಿ ವಿದ್ಯಾರ್ಥಿಗಳ ಎಸ್‌ಎಟಿ ಪರೀಕ್ಷೆ ಶುಲ್ಕ (7,000 ರೂ.) ವಿನಾಯಿತಿ ನೀಡಲಾಗುವುದು. ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂ.ಗೂ ಕಡಿಮೆಯಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಯಾವುದೇ ಜೊತೆಗಾರಿಕೆ ವಿಶ್ವವಿದ್ಯಾ ನಿಲಯದಲ್ಲಿ ವ್ಯಾಸಂಗ ಮಾಡಲು ಸಂಪೂರ್ಣ ಟ್ಯೂಶನ್ ಶುಲ್ಕವನ್ನು ಪಾವತಿಸಲಾಗುವುದು.
 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಫೆಬ್ರವರಿ 08, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/CBI1

ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):

ಮೇಕರ್ಸ್ ಆಶ್ರಯ ಡಿ.ಐ.ವಿ.ಇ 2019 ಯೋಜನೆ
ವಿವರ:
ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಮೇಕರ್ಸ್ ಆಶ್ರಯ, ಕ್ಸೇವಿಯರ್-ಎಮ್ ಲ್ಯೋನ್ ಬ್ಯುಸಿನೆಸ್ ಸ್ಕೂಲ್ ಜೊತೆಯಾಗಿ ಒಂದು ತಿಂಗಳ ಅವಧಿಯ ಪ್ರಾಜೆಕ್ಟ್ ಆಧಾರಿತ ಅನುಭವ ಕಲಿಕಾ ಕಾರ್ಯ ಕ್ರಮವನ್ನು ಆಯೋಜಿಸುತ್ತಿದೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಿತವ್ಯಯ ಆವಿಷ್ಕಾರ, ಬಿಒಪಿ ಅರ್ಥಶಾಸ್ತ್ರ, ಸಾಮಾಜಿಕ ಆವಿಷ್ಕಾರ, ಸಾಮಾಜಿಕ ಉದ್ಯೋಗ, ಸಿಎಸ್‌ಆರ್ ಮತ್ತು ಇತರ ಅನೇಕ ವಿಷಯಗಳ ಬಗ್ಗೆ ಅನುಭವ ಸಿಗಲಿದೆ.
ಅರ್ಹತೆ:
ವಿದ್ಯಾರ್ಥಿಗಳು, ಉದ್ಯೋಗಪತಿ ಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಅರ್ಜಿ ಹಾಕಬಹುದು.
ನೆರವು:
ಯಾವುದೇ ಕೋರ್ಸ್‌ಗೆ ಶೇ.50-75 ಶುಲ್ಕ ವಿನಾಯಿತಿ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಫೆಬ್ರವರಿ 10, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/DMA2

ವಿದ್ಯಾರ್ಥಿವೇತನ
(ಸಂಶೋಧನೆ ಆಧಾರಿತ):

ಐಜಿಎಲ್‌ಪಿ ರೆಸಿಡೆನ್ಶಿಯಲ್ ಫೆಲೊಶಿಪ್ ಪ್ರೋಗ್ರಾಂ, ಹಾರ್ವರ್ಡ್ ಕಾನೂನು ಶಾಲೆ 2019-20, ಅಮೆರಿಕ.
ವಿವರ:
ಜಾಗತಿಕ ಕಾನೂನು ಮತ್ತು ನೀತಿ ಸಂಸ್ಥೆ (ಐಜಿಎಲ್‌ಪಿ) ಹಾರ್ವರ್ಡ್ ಕಾನೂನು ಶಾಲೆ, ಅಂತರ್‌ರಾಷ್ಟ್ರೀಯ ಕಾನೂನು, ಸಮಾಜ ಮತ್ತು ರಾಜಕೀಯ ಆರ್ಥಿಕತೆಯ ಅಭಿವೃದ್ಧಿಯ ಉತ್ತೇಜನಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿದೆ.
ಅರ್ಹತೆ:
ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲ ಹಾಗೂ ಬರೆಯಬಲ್ಲ, ಶೈಕ್ಷಣಿಕ ಹುದ್ದೆಯಲ್ಲಿ ಐದು ವರ್ಷದ ಕಾರ್ಯಾನುಭವ ಇರುವ ಪಿಎಚ್‌ಡಿ ಪದವೀಧರರು ಅರ್ಜಿ ಸಲ್ಲಿಸಬಹುದು.
ನೆರವು:
ವೇತನ, ಕಚೇರಿ ಹಂಚಿಕೆ ಮತ್ತು ಕಂಪ್ಯೂಟರ್ ಮತ್ತು ಪ್ರಿಂಟರ್ ಮುಂತಾದ ಸಂಪನ್ಮೂಲಗಳನ್ನು ಒದಗಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಫೆಬ್ರವರಿ 22, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IRF4

ವಿದ್ಯಾರ್ಥಿವೇತನ
(ಆದಾಯ ಮತ್ತು ಅರ್ಹತೆ ಆಧಾರಿತ):

ಎಚ್‌ಪಿ ಉಡಾನ್
ವಿದ್ಯಾರ್ಥಿವೇತನ 2018-19
ವಿವರ:
ಯಾವುದೇ ಪ್ರಮಾಣೀಕೃತ ಸಂಸ್ಥೆಯಲ್ಲಿ ಮೆಟ್ರಿಕ್‌ನಂತರದ, ಪದವಿಪೂರ್ವ ಮತ್ತು ಡಿಪ್ಲೊಮಾ ಶಿಕ್ಷಣ ಪಡೆಯಲು ಬಯಸುವ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಎಚ್‌ಪಿ ಇಂಕ್. ಇಂಡಿಯಾ ವಿದ್ಯಾರ್ಥಿವೇತನ ನೀಡುತ್ತಿದೆ. ಒಟ್ಟಾರೆ 750 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು ಇದರಲ್ಲಿ ಶೇ.50 ಹೆಣ್ಮಕ್ಕಳಿಗೆ ಮೀಸಲು.
ಅರ್ಹತೆ:
2018ರಲ್ಲಿ 10ನೇ ತರಗತಿ ಮುಗಿಸಿ ಸದ್ಯ ಒಂದು ವರ್ಷದ ಡಿಪ್ಲೊಮಾ/ಐಟಿಐ ಅಥವಾ 2 ವರ್ಷದ ಎಚ್‌ಎಸ್‌ಸಿ/ಡಿಪ್ಲೊಮಾ/ಐಟಿಐ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು. 2018ರಲ್ಲಿ 12ನೇ ತರಗತಿ ಮುಗಿಸಿ ಸದ್ಯ ಮೂರು ವರ್ಷಗಳ ಡಿಪ್ಲೊಮಾ ಅಥವಾ ಯುಜಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು. ಅಭ್ಯರ್ಥಿಗಳು ಕೊನೆಯ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಪಡೆದಿರಬೇಕು ಮತ್ತು ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂ.ಗೂ ಕಡಿಮೆಯಿರಬೇಕು.
ನೆರವು:
11-12ನೇ ತರಗತಿ/ಐಟಿಐ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ 20,000 ರೂ., ಮೂರು ವರ್ಷದ ಪದವಿ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ 30,000ರೂ. ಮತ್ತು ಒಂದು ವರ್ಷದ ಐಟಿಐ/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಒಂದು ಬಾರಿ 20,000 ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಫೆಬ್ರವರಿ 26, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/HUS2

ವಿದ್ಯಾರ್ಥಿವೇತನ
(ಆದಾಯ ಆಧಾರಿತ):

ಸಿಎಲ್‌ಪಿ ಇಂಡಿಯಾ
ವಿದ್ಯಾರ್ಥಿವೇತನ 2019
ವಿವರ:
ಡಿಪ್ಲೊಮಾ ಮತ್ತು ವೃತ್ತಿಪರ ತರಬೇತಿ ಸೇರಿದಂತೆ 10ನೇ ತರಗತಿ ಯಿಂದ ಸ್ನಾತಕೋತರ ಪದವಿವರೆಗೆ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಿಎಲ್‌ಪಿ ಇಂಡಿಯಾ ವಿದ್ಯಾರ್ಥಿ ವೇತನ ಘೋಷಿಸಿದೆ. ಈ ಯೋಜನೆ ಯಡಿ ಪ್ರಮುಖವಾಗಿ ಹೆಣ್ಮಕ್ಕಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಭಾಗಶಃ ಆರ್ಥಿಕ ನೆರವನ್ನು ನೀಡಲಾಗುತ್ತದೆ.
ಅರ್ಹತೆ:
ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಸಿಎಲ್‌ಪಿ ಕಾರ್ಖಾನೆ ಯಿರುವ ಪ್ರದೇಶದಲ್ಲಿ ವಾಸಿಸುವ, 10-12, ಪದವಿ, ಡಿಪ್ಲೊಮಾ, ವೃತ್ತಿಪರ ತರಬೇತಿ ಮತ್ತು ಸ್ನಾತಕೋತರ ಪದವಿ ಪಡೆಯಲು ಬಯಸುವ ಅಭ್ಯರ್ಥಿಗಳು. ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸಿರಬೇಕು.
ನೆರವು:
10-12ನೇ ತರಗತಿಗೆ 6,000ರೂ. ವರೆಗೆ, ಉನ್ನತ ಶಿಕ್ಷಣಕ್ಕೆ 18,000ರೂ. ವರೆಗೆ ನೆರವು ನೀಡಲಾಗುವುದು. ಹೆಣ್ಮಕ್ಕಳಿಗೆ ವಿಶೇಷವಾಗಿ 5,000ರೂ. ಕೊಡುಗೆ ನೀಡಲಾಗುವುದು. ಹುಡುಗರಿಗೆ 2,500ರೂ. ನೀಡಲಾಗುವುದು. ಒಟ್ಟಾರೆ 850 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/CIS10

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News