ಕಲ್ಲುಗುಂಡಿ: 16 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Update: 2019-02-02 13:13 GMT

ಮಡಿಕೇರಿ, ಫೆ.2 : ಸಂಪಾಜೆಯ ಕಲ್ಲುಗುಂಡಿ ನೆಲ್ಲಿಕುಮೇರಿ ಎಂಬಲ್ಲಿ ಸುಮಾರು 16 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆಯಾಗಿದೆ.

ತ್ಯಾಗರಾಜ ಎಂಬವರ ಮನೆಯ ಹಿತ್ತಲಲ್ಲಿ ಕಂಡು ಬಂದ ಕಾಳಿಂಗ ಸರ್ಪವನ್ನು ಉಗರತಜ್ಞ ಅರಂತೋಡಿನ ಶಿವಾನಂದ ಕುಕ್ಕುಂಬಳ ಅವರು ಸೆರೆ ಹಿಡಿದು ಅರಣ್ಯ ಇಲಾಖೆಯ ಸಲಹೆಯಂತೆ ಮಂಗಳೂರಿನ ನಿಸರ್ಗಧಾಮಕ್ಕೆ ಹಸ್ತಾಂತರಿಸಿದರು. ಶರತ್ ಕೀಲಾರು, ಮನೋಹರ್ ಕಳಮೆ, ಕೇಶವ ಬಂಗ್ಲೆಗುಡ್ಡೆ, ನೆಲ್ಲಿಕುಮೇರಿ ನಿವಾಸಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಶಿವಾನಂದ ಅವರ ಕಾರ್ಯಕ್ಕೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News