ಆದಿತ್ಯನಾಥ್ ಬಂಗಾಳ ರ‍್ಯಾಲಿಗೆ ಅನುಮತಿ ನಿರಾಕರಿಸಿದ ಮಮತಾ ಬ್ಯಾನರ್ಜಿ ಸರಕಾರ

Update: 2019-02-03 07:00 GMT

ಕೋಲ್ಕತಾ, ಫೆ.3: ಪಶ್ಚಿಮಬಂಗಾಳದಲ್ಲಿ ರವಿವಾರ ನಡೆಯಬೇಕಾಗಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ರ್ಯಾಲಿಗೆ ತೃಣಮೂಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅನುಮತಿ ನಿರಾಕರಿಸಿದೆ.

ಆದಿತ್ಯನಾಥ್ ಮಾಲ್ಡಾ ಸಮೀಪದ ಉತ್ತರ ದಿಂಜಾಪುರದಲ್ಲಿ ರ್ಯಾಲಿ ನಡೆಸುವ ಕಾರ್ಯಕ್ರಮವಿತ್ತು.

‘‘ಯಾವುದೇ ಪೂರ್ವ ಸೂಚನೆಯಿಲ್ಲದೆ ಸಿಎಂ ರ್ಯಾಲಿಗೆ ಪಶ್ಚಿಮ ಬಂಗಾಳ ಸರಕಾರ ಅನುಮತಿ ನಿರಾಕರಿಸಿದೆ’’ ಎಂದು ಉ.ಪ್ರ. ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಕಳೆದ ತಿಂಗಳು ಮಾಲ್ಡದಲ್ಲಿ ರ್ಯಾಲಿ ನಡೆಯುವ ಮೊದಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಕುರಿತಂತೆ  ಬಿಜೆಪಿ ಹಾಗೂ ಮಮತಾ ಬ್ಯಾನರ್ಜಿ ಸರಕಾರದ ನಡುವೆ ವಾಕ್ಸಮರ ನಡೆದಿತ್ತು.

2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಪ.ಬಂಗಾಳದಲ್ಲಿ 200ಕ್ಕೂ ಅಧಿಕ ಸಾರ್ವಜನಿಕ ಸಭೆಗಳನ್ನು ನಡೆಸಲು ಯೋಜನೆ ಹಾಕಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಈಗಾಗಲೇ ಪ.ಬಂಗಾಳದಲ್ಲಿ ರ್ಯಾಲಿ ನಡೆಸಿದ್ದಾರೆ. ಫೆ.8 ರಂದು ಪ್ರಧಾನಿ ಮತ್ತೊಂದು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News