ದಾವಣಗೆರೆ: ಆಸ್ತಿಯಲ್ಲಿ ಪಾಲು ನೀಡದ ಚಿಕ್ಕಪ್ಪಂದಿರ ಮನೆಯೆದುರು ತಂದೆಯ ಮೃತದೇಹವಿಟ್ಟು ಧರಣಿ

Update: 2019-02-06 06:17 GMT

ದಾವಣಗೆರೆ, ಫೆ.6: ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡದೆ ವಂಚಿಸಿದ್ದಾರೆಂದು ಆರೋಪಿಸಿ ವ್ಯಕ್ತಿಯೋರ್ವ ತನ್ನ ತಂದೆಯ ಮೃತದೇಹವನ್ನು ಚಿಕ್ಕಪ್ಪಂದಿರ ಮನೆ ಮುಂದಿಟ್ಟು ಧರಣಿ ನಡೆಸಿದ ಘಟನೆ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ

ಮೃತ ಕಲ್ಲಿಂಗಪ್ಪ(68) ಎಂಬವರ ಕುಟುಂಬಸ್ಥರು ಈ ಧರಣಿ ನಡೆಸಿ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.

ಕಲ್ಲಿಂಗಪ್ಪರಿಗೆ 28 ಎಕರೆ ಪಿತ್ರಾರ್ಜಿತ ಜಮೀನಿದೆ. ಆದರೆ ಇವರ ತಮ್ಮಂದಿರಾದ ಶೇಖರಪ್ಪ ಹಾಗೂ ಶಂಕರಪ್ಪ ಈ ಆಸ್ತಿಯಲ್ಲಿ ಕಲ್ಲಿಂಗಪ್ಪರಿಗೆ ಪಾಲು ನೀಡದೆ ಕಳೆದ 17 ವರ್ಷಗಳಿಂದ ವಂಚಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ನಮಗೆ ಹೊಡೆಯಲು ಬರುತ್ತಾರೆ. ಇದೇ ಕಾರಣಕ್ಕೆ ನೊಂದು ಕಲ್ಲಿಂಗಪ್ಪ ಸಾವನ್ನಪ್ಪಿದ್ದಾರೆ. ಆದರೆ ನಮಗೆ ಇನ್ನಾದರೂ ನ್ಯಾಯ ಒದಗಿಸಿಕೊಡಬೇಕು ಎಂಬುದು ಕಲ್ಲಿಂಗಪ್ಪ ಕುಟುಂಬದ ಅಳಲು.

ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News