ಪುಸ್ತಕದ ಬೈಂಡಿಂಗ್ ಸರಿಯಿಲ್ಲ: ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯರ ತಕರಾರು

Update: 2019-02-06 07:23 GMT

ಬೆಂಗಳೂರು, ಫೆ.6: ರಾಜ್ಯಪಾಲರ ಭಾಷಣದ  ಪುಸ್ತಕದ ಬೈಂಡಿಂಗ್ ಸರಿಯಿಲ್ಲವೆಂದು ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸದನಕ್ಕೆ ವಿತರಿಸಲಾದ ರಾಜ್ಯಪಾಲರ ಭಾಷಣದ ಪುಸ್ತಕದ ಬೈಂಡಿಂಗ್ ಸರಿಯಿಲ್ಲ. ಸಾಮಾನ್ಯ ಪುಸ್ತಕವನ್ನೇ ನೀಡಲಾಗಿದೆ. ಯಾಕೆ ಈ ರೀತಿ ತಾರತಮ್ಯ ಮಾಡುತ್ತೀರಿ ಎಂದು ಬಿಜೆಪಿ ಸದಸ್ಯರು ಸ್ವೀಕರ್ ಪ್ರತಾಪ್ ಚಂದ್ರ ಶೆಟ್ಟಿ ಅವರಲ್ಲಿ ಪ್ರಶ್ನಿಸಿದರು.

ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಐವನ್ ಡಿ ಸೋಜ ಅವರು ಕಳೆದ ಸರಕಾರದ ಅವಧಿಯಲ್ಲಿ ಇದೇ ರೀತಿಯ ಪುಸ್ತಕ ನೀಡಲಾಗಿತ್ತು ಎಂದು ಹೇಳಿದಾಗ,  ಕಳೆದ ಅವಧಿಯಲ್ಲಿ ಅಧಿಕಾರದಲ್ಲಿ ಇದ್ದದ್ದು ನಿಮ್ಮ ಸರಕಾರ  ಎಂದು ಬಿಜೆಪಿ ಸದಸ್ಯರು ಐವನ್ ರ ಕಾಲೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News