ಸಂವಿಧಾನದ ಆಶಯಗಳಿಗೆ ಧಕ್ಕೆ ತರಲು ಮುಂದಾಗಿರುವವರಿಗೆ ಬುದ್ದಿ ಕಲಿಸುವ ಕಾಲ ಸನ್ನಿಹಿತವಾಗಿದೆ: ನಿಡುಮಾಮಿಡಿ ಶ್ರೀ

Update: 2019-02-09 09:38 GMT

ಮೈಸೂರು, ಫೆ. 9: ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರಲು ಮುಂದಾಗಿರುವವರಿಗೆ ಬುದ್ದಿ ಕಲಿಸುವ ಕಾಲ ಸನ್ನಿಹಿತವಾಗಿದ್ದು ಜನರು ಜಾಗೃತಬೇಕಿದೆ ಎಂದು ಬೆಂಗಳೂರಿನ ನಿಡುಮಾಮಿಡಿ ಶ್ರೀ ವೀರಭದ್ರಚನ್ನಮಲ್ಲ ಸ್ವಾಮೀಜಿ ಕರೆ ನೀಡಿದರು.

ನಗರದ ಹುಣಸೂರು ರಸ್ತೆಯಲ್ಲುರುವ ರಾಣಿಬಹದ್ದೂರ್ ಸಭಾಂಗಣದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ ವತಿಯಿಂದ ಶನಿವಾರ ಆಯೋಜಿಸಿದ್ದ ಭಾರತೀಯ ಸಂವಿಧಾನ-ಸಾಮಾಜಿಕ ನ್ಯಾಯ- ಸಾಮೂಹಿಕ ಜವಾಬ್ದಾರಿಗಳು-ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ತೃತೀಯ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ನೂರ ಮೂರು ಬಾರಿ ಸಂವಿಧಾನ ತಿದ್ದುಪಡಿ ಮನನ ಆಡಲಾಗಿದೆ. ಆಗ ಮೂಲ ಆಶಯಗಳಿಗೆ ಧಕ್ಕೆ ತರುವ ಕೆಲಸ ಮಾಡಿರಲಿಲ್ಲ, ಆದರೆ ಇತ್ತೀಚಿನ ವರ್ಷಗಳಲ್ಲಿ ಸಂವಿಧಾನ ಪರಾಮರ್ಶೆ ಮತ್ತು ಬದಲಾವಣೆಗೆ ಕೈ ಹಾಕಿರುವುದು ದೇಶಕ್ಕೆ ಅಪಾಯ ಹಾಗಾಗಿ ಅಂತಹ ಕೆಲಸಕ್ಕೆ ಮುಂದಾಗಿರುವವರ ವಿರುದ್ಧ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ದೇಶದಲ್ಲಿ ಸಾಕಷ್ಟು ಬಡವರಿದ್ದಾರೆ ಜಾತಿಗೆ ಅನುಗುಣವಾಗಿ ಮೀಸಲಾತಿ ಜಾರಿ ಮಾಡಬೇಕಿತ್ತು. ಆದರೆ ಮೇಲ್ವರ್ಗದವರ ಓಟಿಗಾಗಿ 10% ಮೀಸಲಾತಿ ಜಾರಿಮಾಡಲಾಗಿದೆ. ಇದಕ್ಕೆ ಎಲ್ಲಾ ಪಕ್ಷಗಳು ತಲೆ ಅಲ್ಲಾಡಿಸಿವೆ. ಹಾಗಿದ್ದ ಮೇಲೆ ಮಹಿಳಾ ಮೀಸಲಾತಿ ಜಾರಿಗೊಳಿಸಲು ಏಕೆ ಚಕಾರ ಎತ್ತುತ್ತಿಲ್ಲವೆಂದು ಪ್ರಶ್ನಿಸಿದರು.

ಹಿಂದುಳಿದ ಮತ್ತು ಅಲ್ಪಸಂಖ್ಯಾರಿಗೆ ಉದ್ಯೊಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ರಾಜಕೀಯವಾಗಿ ನೀಡಲಾಗುತ್ತಿಲ್ಲ, ಇದರಿಂದ ಪ್ರಬಲವಾಗಿಲ್ಲದ  ಸಾಕಷ್ಟು ಸಮುದಾಯಗಳು ವಂಚಿತವಾಗುತ್ತಿವೆ. ಎಲ್ಲಾ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ನೀಡಿದ್ದೇ ಆದರೆ ದೇಶ ಅಭಿವೃದ್ಧಿಯತ್ತ ಮುನ್ನಡೆಯಲಿದೆ ಎಂದು ನಿಡುಮಾಮಿಡಿ ಶ್ರೀಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News