ವರದಕ್ಷಿಣೆ ಕಿರುಕುಳ: ಸರ್ಕಾರಿ ಅಧಿಕಾರಿ ವಿರುದ್ಧ ದೂರು

Update: 2019-02-14 12:32 GMT

ತುಮಕೂರು,ಫೆ.14: ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಜಾವೀದ್ ಕೆ.ಕಾರಂಗಿ ವಿರುದ್ಧ ಪ್ರಕರಣ ದಾಖಲಾಗಿದೆ. 
ತುಮಕೂರು ಮೂಲದ ಅಸ್ಮಾ ತಾಜ್ ಹಾಗೂ ಬಳ್ಳಾರಿ ಮೂಲದ ಜಾವೀದ್ ಕಾರಂಗಿಗೆ 2018 ರ ಆಗಸ್ಟ್ 26 ರಂದು ಮದುವೆಯಾಗಿತ್ತು. ಮದುವೆಯಾದ 5 ತಿಂಗಳಲ್ಲಿಯೇ ಜಾವೀದ್ ಹಾಗೂ ಕುಟುಂಬದವರು ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಪತ್ನಿ ಅಸ್ಮಾ ತಾಜ್ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಮದುವೆಯಾದಗಿಂದಲೂ ಕೂಡಾ ಜಾವೀದ್ ತನ್ನ ಪತ್ನಿ ಅಸ್ಮಾ ತಾಜ್‍ಗೆ ವರದಕ್ಷಿಣೆ ಕಿರುಕುಳ ಸೇರಿದಂತೆ ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜಾವೀದ್ ಹಾಗೂ ಅವರ ತಂದೆ ಖ್ವಾಜಾ ಮೋಹಿದ್ದಿನ್, ತಾಯಿ ಫಾತಿಮಾಬಿ, ನಾದಿನಿಯರಾದ ಗೌಸಿಯಾ, ರುಕ್ಸಾನಾ ವಿರುದ್ಧ ಎಫ್‍ಐಆರ್ ದಾಖಲಾಗಿದೆ. 

ಮದುವೆಯಾದ ಬಳಿಕ ಪತಿ ಕೆಲಸದ ನಿಮಿತ್ತ ತುಮಕೂರಿಗೆ ತೆರಳಿದ್ದರು. ಬಳ್ಳಾರಿಯಲ್ಲಿ ಮಾವನ ಮನೆಯಲ್ಲಿದ್ದ ಅಸ್ಮಾ ತಾಜ್‍ಗೆ, ಮಾವ, ಅತ್ತೆ, ನಾದಿನಿಯರು ವರದಕ್ಷಿಣಿಗೆ ಕಿರುಕುಳ ನೀಡುವ ಮೂಲಕ ತನ್ನ ಪತಿಗೆ ಬೇರೆ ಮದುವೆ ಮಾಡುವುದಾಗಿ ಹೇಳಿ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಆಸ್ಮಾ ತಾಜ್ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News