ರಾಜ್ಯ ಬಜೆಟ್‍ನಲ್ಲಿ ಮುಸ್ಲಿಮರ ಕಡಗಣನೆ ಆರೋಪ: ಎಸ್‍ಡಿಪಿಐಯಿಂದ ಪ್ರತಿಭಟನೆ

Update: 2019-02-15 06:46 GMT

ಮೈಸೂರು, ಫೆ.15: ರಾಜ್ಯ ಸರಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ ನಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಎಸ್.ಡಿ.ಪಿ.ಐ. ಮೈಸೂರು ವತಿಯಿಂದ ಗುರುವಾರ ಫೌನ್ಟೆನ್ ಸರ್ಕಲ್ ಹತ್ತಿರ ಪ್ರತಿಭಟನೆ ನೆಡೆಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೌಶನ್ ಬೇಗ್, ರಾಜ್ಯದಲ್ಲಿ 90 ಲಕ್ಷದಷ್ಟಿರುವ ಮುಸ್ಲಿಮರಿಗೆ ಕೇವಲ ರೂ.400 ಕೋಟಿಯಷ್ಟು ಬಜೆಟ್ ನೀಡಿ ಕಡೆಣಿಸಲಾಗಿದೆ ಹಾಗೂ ಮುಸ್ಲಿಮ್ ಸಮಾಜವನ್ನು ವೋಟ್ ಬ್ಯಾಂಕ್ ರಾಜಕೀಯ ಸಿಮೀತಗೊಳಿಸಿದೆ. ಇದನ್ನು ಖಂಡಿಸಿ ಎಸ್.ಡಿ.ಪಿ.ಐ. ರಾಜ್ಯವ್ಯಾಪ್ತಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಆಝಂ ಪಾಷ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಸ್ಲಿಮ್ ಸಮಾಜವನ್ನು ವೋಟ್ ಬ್ಯಾಂಕ್ ರಾಜಕೀಯಕ್ಕೆ ಸಿಮೀತಗೊಳಿಸಿದೆ ಹಾಗೂ ಮುಸ್ಲಿಂ ಸಮಾಜವನ್ನು ವೋಟ್ ಬ್ಯಾಂಕ್ ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್.ಡಿ.ಪಿ.ಐ. ಮೈಸೂರು ಜಿಲ್ಲಾ ಸಮಿತಿ ಸದಸ್ಯರಾದ ತಬ್ರೇಝ್ ಸೇಠ್, ಜಾಫರ್ ಪಾಶ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News