ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-02-15 18:39 GMT

ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧಾರಿತ):

 ಪೊಲೀಸ್ ಮೆಮೋರಿಯಲ್ ಫಂಡ್ ಸ್ಕಾಲರ್‌ಶಿಪ್ 2019
ವಿವರ:
ಕರ್ತವ್ಯದಲ್ಲಿರುವಾಗ ಮರಣಹೊಂದಿದ ಗುಪ್ತಚರ ವಿಭಾಗದ ಅಧಿಕಾರಿ ಗಳ ಅಥವಾ ಪೊಲೀಸರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಭಾರತ ಸರಕಾರದ ಗೃಹ ಸಚಿವಾಲಯದ ಗುಪ್ತಚರ ವಿಭಾಗವು ಈ ಸ್ಕಾಲರ್‌ಶಿಪ್ ಒದಗಿಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲಾಗುವುದು.
ಅರ್ಹತೆ:
ಗೆಝೆಟೆಡ್ ಹುದ್ದೆಯಲ್ಲದ, ಕರ್ತವ್ಯದಲ್ಲಿದ್ದಾಗ ಮೃತಪಟ್ಟಿರುವ ಅಧಿಕಾರಿ ಅಥವಾ ಪೊಲೀಸ್ ಸಿಬ್ಬಂದಿಯ ಮಕ್ಕಳು ಅರ್ಹರು. ಇವರನ್ನು ಪೊಲೀಸ್ ಅಧೀಕ್ಷಕರು/ಸಹಾಯಕ ನಿರ್ದೇಶಕರು/ಕಮಾಂಡೆಂಟ್ ಹುದ್ದೆಗಿಂತ ಉನ್ನತ ಅಧಿಕಾರಿಗಳು ಶಿಫಾರಸು ಮಾಡಿರಬೇಕು.
ನೆರವು:
 ಆಯ್ದ ಅಭ್ಯರ್ಥಿಗಳಿಗೆ ವೃತ್ತಿಪರ ಕೋರ್ಸ್ ಅಥವಾ ವಿವಿಯಲ್ಲಿ ಶೈಕ್ಷಣಿಕ ಕೋರ್ಸ್ ಕಲಿಯಲು ಆರ್ಥಿಕ ನೆರವು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 28, 2019
ಅರ್ಜಿ: ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/PMF6

************************
ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):

ನ್ಯೂ ಇ-ಕಾಮರ್ಸ್ ಸ್ಕಾಲರ್‌ಶಿಪ್ 2019
ವಿವರ:
ಇ-ಕಾಮರ್ಸ್ ಮತ್ತು ಇಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಅಧ್ಯಯನ ನಡೆಸಲು ಆಸಕ್ತರಿಗೆ ಪ್ರಬಂಧ ಸ್ಪರ್ಧೆ ಆಧಾರಿತ ಸ್ಕಾಲರ್‌ಶಿಪ್ ಯೋಜನೆಯಿದು. ಮೇಲೆ ತಿಳಿಸಿದ ಎರಡು ವಿಷಯಗಳಲ್ಲಿ ತಮ್ಮ ಜ್ಞಾನವನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಅಭಿವ್ಯಕ್ತಗೊಳಿಸಲು ಬಯಸುವವರು ತಮ್ಮ ಪ್ರಬಂಧಗಳನ್ನು ಕಳಿಸಬಹುದು.
ಅರ್ಹತೆ:
ಭಾರತದ ಮಾನ್ಯತೆ ಪಡೆದ ಉನ್ನತ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿರುವ, 17 ವರ್ಷ ಕ್ಕಿಂತ ಹೆಚ್ಚಿನ ವಯಸ್ಸಿನ ವಿದ್ಯಾರ್ಥಿಗಳು ಪ್ರಬಂಧ ಸಲ್ಲಿಸಬಹುದು.
ನೆರವು:
 ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಯಾದ ಅಭ್ಯರ್ಥಿ ಗಳಿಗೆ 1,500 ಅಮೆರಿಕನ್ ಡಾಲರ್ ಮೊತ್ತದ ನೆರವನ್ನು ಎಂಒಎಆರ್‌ಎಂಒಯುಝಡ್ ಸಂಸ್ಥೆ ನೀಡುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಫೆಬ್ರವರಿ 28, 2019
ಅರ್ಜಿ:  ಆನ್‌ಲೈನ್ ಮೂಲಕ ಪ್ರಬಂಧ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/NES9
***********************
ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):

ಐಐಟಿಎಂ ಫೆಲೊಶಿಪ್ 2019
ವಿವರ:
ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಸೈಯನ್ಸ್ ಆ್ಯಂಡ್ ಹ್ಯುಮಾನಿಟೀಸ್‌ನಲ್ಲಿ ಪದವಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್ ನೀಡುವ ಎರಡು ತಿಂಗಳ ಬೇಸಿಗೆ ಕಾಲದ ಫೆಲೊಶಿಪ್ ಕಾರ್ಯಕ್ರಮವಿದು.
ಅರ್ಹತೆ:
3ನೇ ವರ್ಷದ ಬಿಟೆಕ್/ಬಿಇ/ಬಿಎಸ್ಸಿ, ಅಥವಾ 3/4ನೇ ವರ್ಷದ ಸಂಯೋಜಿತ ಎಂಟೆಕ್/ಎಂಇ ಕಲಿಯುತ್ತಿರು ವವರು ಅರ್ಜಿ ಸಲ್ಲಿಸಬಹುದು. ಪ್ರಥಮ ವರ್ಷದ ಎಂಬಿಎ/ಎಂಎ ವಿದ್ಯಾರ್ಥಿಗಳು, ಪೂರ್ಣಕಾಲಿಕ ಎಂಟೆಕ್, ಎಂಇ ಕಲಿಯುತ್ತಿರುವ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು.
ನೆರವು:
 ಆಯ್ದ ಅಭ್ಯರ್ಥಿಗಳಿಗೆ ವಾರಕ್ಕೆ 600 ಸಿಎಡಿ (ಕೆನಡಿಯನ್ ಡಾಲರ್ ಮೊತ್ತ) ಮತ್ತು ಫೆಲೊಶಿಪ್ ಮುಗಿದ ಬಳಿಕ ಪೂರ್ಣಕಾಲಿಕ ಉದ್ಯೋಗ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಫೆಬ್ರವರಿ 28, 2019
ಅರ್ಜಿ: ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/ISF19
*************************
ವಿದ್ಯಾರ್ಥಿವೇತನ
(ವೃತಿಪರ/ ಸಂಶೋಧನೆ ಆಧಾರಿತ):

ಪ್ರಕೃತಿ ರಿಸರ್ಚ್ ಫೆಲೊಶಿಪ್ 2019-20
ವಿವರ:
 ನೇರ, ಸ್ಪಷ್ಟ, ದೀರ್ಘಾವಧಿ ಪರಿಣಾಮದ ಪ್ರಕೃತಿ ಸಂರಕ್ಷಣೆ ವಿಷಯದಲ್ಲಿ ಸ್ವತಂತ್ರವಾಗಿ ಸಂಶೋಧನೆ ನಡೆಸುತ್ತಿರುವವರು ಅಥವಾ ಸಣ್ಣ ಎನ್‌ಜಿಒ ಸಂಸ್ಥೆ ಗಳಿಂದ ಸೆಂಟರ್ ಫಾರ್ ಅಪ್ಲಯ್ಡೆ ರಿಸರ್ಚ್ ಆ್ಯಂಡ್ ಪೀಪಲ್ಸ್ ಎಂಗೇಜ್‌ಮೆಂಟ್(ಸಿಎಆರ್‌ಪಿಇ) ಅರ್ಜಿ ಆಹ್ವಾನಿಸಿದೆ.
ಅರ್ಹತೆ:
 ಪ್ರಕೃತಿ ಸಂರಕ್ಷಣೆ ಕುರಿತು ಸ್ವಯಂಪ್ರೇರಣೆಯಿಂದ ಸ್ವತಂತ್ರವಾಗಿ ಸಂಶೋಧನೆ ನಡೆಸುವ ಭಾರತೀಯ ಸಂಶೋಧಕರು, ಭಾರತದ ಸಣ್ಣ ಎನ್‌ಜಿಒ ಸಂಸ್ಥೆಗಳು ಅಥವಾ ಸಂರಕ್ಷಣಾ ತಂಡಗಳು ಅರ್ಜಿ ಸಲ್ಲಿಸಬಹುದು.
ನೆರವು:
ಆಯ್ದ ಅಭ್ಯರ್ಥಿಗಳಿಗೆ ಮತ್ತು ಅವರ ಯೋಜನೆ ಗಳಿಗೆ 2 ಲಕ್ಷ ರೂ.ನಷ್ಟು ಆರ್ಥಿಕ ನೆರವು ಒದಗಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:
ಫೆಬ್ರವರಿ 28, 2019
ಅರ್ಜಿ: ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/PRF3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News