ನಾನು ಈಗ ಯಾರೂ ಅಲ್ಲ, ನನ್ನ ಕೈಯಲ್ಲೇನೂ ಇಲ್ಲ ಎಂದ ಅನಿಲ್ ಅಂಬಾನಿ!

Update: 2019-02-16 09:03 GMT

ಹೊಸದಿಲ್ಲಿ, ಫೆ.16: ರಿಲಯನ್ಸ್ ಕಮ್ಯುನಿಕೇಶನ್ಸ್ ಹಾಗೂ ಕಂಪನಿಯ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ಎರಿಕ್ಸನ್ ಸಂಸ್ಥೆ ಹೂಡಿರುವ ದಾವೆಗೆ ಸಂಬಂಧಿಸಿದಂತೆ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ಸ್ವೀಡನ್ ಮೂಲದ ಮೊಬೈಲ್ ಪರಿಕರ ಪೂರೈಕೆ ಕಂಪನಿಗೆ ಪಾವತಿಸಬೇಕಿರುವ 550 ಕೋಟಿ ರೂ.ಗೆ ಸಂಬಂಧಿಸಿದಂತೆ ರಿಲಯನ್ಸ್ ವಿರುದ್ಧ ದಾವೆ ಹೂಡಲಾಗಿತ್ತು.

ಆದರೆ ಕೋರ್ಟ್‍ ನಲ್ಲಿ ದಿನವಿಡೀ ನಡೆದ ವಾದ ಪ್ರತಿವಾದದ ವೇಳೆ ಹಲವು ಕುತೂಹಲಕರ ಅಂಶಗಳು ಬೆಳಕಿಗೆ ಬಂದವು. ಸಾಕಷ್ಟು ಸಂಪತ್ತು ಇರುವ ಅನಿಲ್ ಅಂಬಾನಿ ರಾಜನಂತೆ ಮೆರೆಯುತ್ತಿದ್ದಾರೆ. ಇಷ್ಟಾಗಿಯೂ ಬಾಕಿ ಪಾವತಿ ಮಾಡುತ್ತಿಲ್ಲ ಎಂದು ಎರಿಕ್ಸನ್ ಪರ ವಕೀಲರು ಆಪಾದಿಸಿದರು. ಆಗ ಅಂಬಾನಿ ಪರ ವಕೀಲರು ಇದು ಉದ್ದೇಶಪೂರ್ವಕ ಸುಸ್ತಿಬಾಕಿಯಲ್ಲ ಎಂದು ಸಮರ್ಥಿಸಿಕೊಂಡರು.

ಅಂಬಾನಿ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟ್ಗಿ, "ನಾನು ಈಗ ಯಾರೂ ಅಲ್ಲ. ಎಲ್ಲವೂ ಮುಗಿಯಿತು. ನನ್ನ ಕೈಯಲ್ಲೇನೂ ಇಲ್ಲ" ಎಂದು ಅಂಬಾನಿ ಹೇಳಿದ್ದನ್ನು ಉಲ್ಲೇಖಿಸಿದರು.

ಹಿರಿಯ ವಕೀಲರಾದ ದುಷ್ಯಂತ್ ದವೆ ಮತ್ತು ಅನಿಲ್ ಖೇರ್ ಎರಿಕ್ಸನ್ ಪರ ಹಾಜರಾಗಿದ್ದರು. ದಿವಾಳಿತನ ಪ್ರಕ್ರಿಯೆ ತಪ್ಪಿಸುವ ಸಲುವಾಗಿ ಬಾಕಿ ತೀರಿಸುವುದಾಗಿ ಅನಿಲ್ ಅಂಬಾನಿ ಭರವಸೆ ನೀಡಿದ್ದರು ಎಂದು ವಕೀಲರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News