ರಾಜೌರಿ: ಐಇಡಿ ಸ್ಫೋಟಗೊಂಡು ಸೇನಾಧಿಕಾರಿ ಮೃತ್ಯು

Update: 2019-02-16 12:03 GMT

ಹೊಸದಿಲ್ಲಿ, ಫೆ.16: ಐಇಡಿ (ಸುಧಾರಿತ ಸ್ಫೋಟಕ) ಸ್ಫೋಟಗೊಂಡು ಸೇನಾಧಿಕಾರಿಯೊಬ್ಬರುಮೃತಪಟ್ಟ ಘಟನೆ ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಶನಿವಾರ ನಡೆದಿದೆ. ಐಇಡಿಯನ್ನು ನಿಷ್ಕ್ರಿಯಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಪಾಕಿಸ್ತಾನದ ನುಸುಳುಕೋರರು ಈ ಸ್ಫೋಟಕವನ್ನು ಹುದುಗಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News