10 ರೂಪಾಯಿಗೆ ಸೀರೆ: ಶಾಪಿಂಗ್ ಮಾಲ್‌ನಲ್ಲಿ ನೀರೆಯರ ನೂಕುನುಗ್ಗಲು

Update: 2019-02-17 03:57 GMT

ಹೈದರಾಬಾದ್, ಫೆ.17: ಕೇವಲ 10 ರೂಪಾಯಿ ಬೆಲೆಯ ಸೀರೆ ಖರೀದಿಸುವ ಸಲುವಾಗಿ ಮಹಿಳೆಯರು ಇಲ್ಲಿನ ಸಿದ್ದಿಪೇಟೆಯ ಶಾಪಿಂಗ್ ಮಾಲ್‌ಗೆ ಪ್ರವಾಹೋಪಾದಿಯಲ್ಲಿ ನುಗ್ಗಿದ ಪರಿಣಾಮವಾಗಿ, ಮಾಲ್‌ನಲ್ಲಿ ವಿಪರೀತ ನೂಕುನುಗ್ಗಲು ಸಂಭವಿಸಿ ಕಾಲ್ತುಳಿತದಂಥ ಸ್ಥಿತಿ ನಿರ್ಮಾಣವಾಗಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ.

ಎಂಸಿಆರ್ ಶಾಪಿಂಗ್ ಮಾಲ್‌ನಲ್ಲಿ 10 ರೂಪಾಯಿಗೆ ಸೀರೆ ಮಾರಾಟವಾಗುತ್ತಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ, ಮಹಿಳೆಯರು ಹಾಗೂ ಬಾಲಕಿಯರು ಏಕಕಾಲಕ್ಕೆ ಆಗಮಿಸಿದ್ದರಿಂದ ನೂಕುನುಗ್ಗಲು ಸಂಭವಿಸಿತು ಎಂದು ಪೊಲೀಸರು ಹೇಳಿದ್ದಾರೆ.

ಇದೇ ಸಂದರ್ಭವನ್ನು ಕಳ್ಳರು ತಮ್ಮ ಕೈಚಳಕಕ್ಕೆ ಬಳಸಿಕೊಂಡಿದ್ದಾರೆ. 5 ತೊಲೆಯ ಚಿನ್ನದ ಸರ, ಆರು ಸಾವಿರ ರೂಪಾಯಿ ನಗದು ಹಾಗೂ ಡೆಬಿಟ್ ಕಾರ್ಡ್ ಕಳ್ಳತನವಾಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸಿಎಂಆರ್ ಮಾಲ್‌ಗೆ ತೆರಳಿ ಬಂದೋಬಸ್ತ್ ಆಯೋಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News