ಹುತಾತ್ಮ ಯೋಧರಿಗೆ ಪರಿಹಾರ ನಿಧಿ: 10 ನಿಮಿಷಗಳಲ್ಲಿ 17.5 ಲಕ್ಷ ರೂ. ಸಂಗ್ರಹ

Update: 2019-02-17 06:23 GMT

ಮುಂಬೈ, ಫೆ.17: ಪುಲ್ವಾಮದಲ್ಲಿ ಉಗ್ರರ ಬಾಂಬ್ ದಾಳಿಗೆ ಸಿಲುಕಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಪರಿಹಾರ ನಿಧಿ ಸಂಗ್ರಹಿಸುವ ಕಾರ್ಯ ದೇಶದ ಎಲ್ಲಡೆ ನಡೆಯುತ್ತಿದ್ದು, ಮುಂಬೈನಲ್ಲಿ ಕೇವಲ 10 ನಿಮಿಷಗಳಲ್ಲಿ 17.5 ಲಕ್ಷ ಸಂಗ್ರಹವಾಗಿದೆ.

ದಿನಗೂಲಿ ನೌಕರರು, ಕಾರ್ಮಿಕರು , ತಳ್ಳುಗಾಡಿ ವ್ಯಾಪಾರಿಗಳು  ಯೋಧರ ನಿಧಿಗೆ ದೇಣಿಗೆ ನೀಡಿದವರಲ್ಲಿ ಪ್ರಮುಖರು.

ಗ್ರಾಂಟ್ ರಸ್ತೆಯ ಸ್ಕೂಟರ್ ಪಾರ್ಟ್ಸ್ ಅಸೋಸಿಯೇಶನ್ ಶನಿವಾರ ಬೆಳಗ್ಗೆ ಸಭೆ ಸೇರಿ ಅಗಲಿದ ಯೋಧರಿಗೆ ಸಂತಾಪ ವ್ಯಕ್ತಪಡಿಸಿತು. ಈ ಸಂರ್ಭದಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ ಪರಿಹಾರ ಧನ ಸಂಗ್ರಹಿಸುವ ನಿರ್ಧಾರ ಕೊಳ್ಳಲಾಗಿತ್ತು. ಬಳಿಕ ನಡೆದ  ದೇಣಿಗೆ  ಸಂಗ್ರಹ ಕಾರ್ಯಕ್ಕೆ ಉತ್ತಮ ಬೆಂಬಲ ಸಿಕ್ಕಿದೆ.

 ಬೇಲ್ ಪುರಿ ವ್ಯಾಪಾರಿ  1,100 ರೂ. ದೇಣಿಗೆ ನೀಡಿದ್ದಾರೆ. ಅವರು ಇದರೊಂದಿಗೆ ತನ್ನ ಒಂದು ದಿನದ ಸಂಪಾದನೆಯನ್ನು ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ಪುಲ್ವಾಮದಲ್ಲಿ ಉಗ್ರರ  ದಾಳಿಯಿಂದಾಗಿ ಮಹಾರಾಷ್ಟ್ರದ ಇಬ್ಬರು ಯೋಧರಾದ ಲುನಾರ ತಾಲೂಕಿನ ನಿತಿನ್ ರಾಥೋಡ್ ಮತ್ತು ಪಲ್ಕಾಪುರ ತಾಲೂಕಿನ ಸಂಜತ್ ರಜಪೂತ್  ಬಲಿಯಾಗಿದ್ದರು.

2016 ಸೆಪ್ಟಂಬರ್ ನಲ್ಲಿ  ಉರಿ ದಾಳಿ ನಡೆದ ಸಂದರ್ಭದಲ್ಲಿ ಸಣ್ಣ ವ್ಯಾಪಾರಿಗಳು 1.5 ಲಕ್ಷ ರೂ. ಸಂಗ್ರಹಿಸಿದ್ದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News