ಮೋದಿ-ಸಲ್ಮಾನ್ ಮಾತುಕತೆ: ಭಾರತದ ಹಜ್ ಕೋಟಾ 2 ಲಕ್ಷಕ್ಕೆ ಏರಿಸಿದ ಸೌದಿ

Update: 2019-02-20 18:38 GMT

ಹೊಸದಿಲ್ಲಿ, ಫೆ. 20: ಸೌದಿ ಅರೇಬಿಯಾ ಬುಧವಾರ ಭಾರತದ ಹಜ್ ಕೋಟಾವನ್ನು 25,000 ಏರಿಕೆ ಮಾಡಿದೆ. ಇದು ಮೂರು ವರ್ಷಗಳಲ್ಲಿ ಮೂರನೇ ಬಾರಿ ಏರಿಕೆ ಮಾಡುತ್ತಿರುವುದು. ಇದರೊಂದಿದೆ ದೇಶದಿಂದ ಹಜ್ ಯಾತ್ರೆಗೆ ಹೋಗುವವರ ಸಂಖ್ಯೆ ವಾರ್ಷಿಕ 2 ಲಕ್ಷಕ್ಕೆ ಏರಿಕೆಯಾಗಿದೆ.

ಭಾರತಕ್ಕೆ ಭೇಟಿ ನೀಡಿದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಘೋಷಣೆ ಮಾಡಿದೆ.

ಏರಿಕೆಯಾದ ಕೋಟಾ ಸಾಗಾಟ ಹಾಗೂ ಇತರ ಅಂಶಗಳನ್ನು ಅವಲಂಬಿಸಿ ಅನುಷ್ಠಾನಗೊಳಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಆರ್ಥಿಕ ವ್ಯವಹಾರ) ಟಿ.ಎಸ್. ಗುರುಮೂರ್ತಿ ಹೇಳಿದ್ದಾರೆ. ಈ ಕೋಟಾ ಈ ವರ್ಷದಿಂದ ಅಸ್ತಿತ್ವಕ್ಕೆ ಬರಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.

‘‘ಹಜ್ ಕೋಟಾ ಏರಿಕೆ ಮಾಡುತ್ತಿರುವುದು ಇದು ಮೂರನೇ ಬಾರಿ. 2014ರಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಹಜ್ ಕೋಟಾ 1,36,000 ಇತ್ತು. ಅದು ಈಗ 2 ಲಕ್ಷಕ್ಕೆ ಏರಿಕೆಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಹಜ್‌ಗೆ ಅತ್ಯಧಿಕ ಜನರು ಯಾತ್ರೆ ಕೈಗೊಳ್ಳಲಿದ್ದಾರೆ’’ ಎಂದು ನಕ್ವಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News