ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-02-22 18:46 GMT

ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):

ಭಾರತದ ಜೂನಿಯರ್ ಬಯೋಮೆಡಿಕಲ್ ವಿಜ್ಞಾನಿಗಳಿಗೆ ಐಸಿಎಂಆರ್-ಡಿಎಚ್‌ಆರ್ ಇಂಟರ್‌ನ್ಯಾಷನಲ್ ಫೆಲೊಶಿಪ್ 2019
ವಿವರ:
 ಸಂಶೋಧನಾ ಕಾರ್ಯ ಕೈಗೊಳ್ಳಲು ಬಯಸುವ ಯುವ ಭಾರತೀಯ ಬಯೋಮೆಡಿಕಲ್ ವಿಜ್ಞಾನಿಗಳಿಂದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮತ್ತು ಡಿಪಾರ್ಟ್‌ಮೆಂಟ್ ಆಫ್ ಹೆಲ್ತ್ ರಿಸರ್ಚ್(ಡಿಎಚ್‌ಆರ್) ಅರ್ಜಿ ಆಹ್ವಾನಿಸಿದೆ.
ಅರ್ಹತೆ:
ಬೋಧಕರಾಗಿ ಅಥವಾ ಸಂಶೋಧಕರಾಗಿ 3 ವರ್ಷದ ಅನುಭವ ಹೊಂದಿರುವ, ಆರೋಗ್ಯ ಮತ್ತು ಬಯೋಮೆಡಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಎಂಎಸ್, ಎಂಡಿ ಅಥವಾ ಪಿಎಚ್‌ಡಿ ಪದವೀಧರರು(ಭಾರತೀಯರು) ಅರ್ಜಿ ಸಲ್ಲಿಸಬಹುದು.
ನೆರವು:
ಆಯ್ದ ಅಭ್ಯರ್ಥಿಗಳಿಗೆ 6ರಿಂದ 12 ತಿಂಗಳಾವಧಿಗೆ ನಿಗದಿತ ಸಂಶೋಧನಾ ಕಾರ್ಯ ಕೈಗೊಳ್ಳಲು ಅವಕಾಶ ನೀಡಲಾಗುವುದು. ಅಲ್ಲದೆ ತಿಂಗಳಿಗೆ 3 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಸ್ಟೈಪೆಂಡ್, ಸಂಶೋಧನಾ ಸಂಬಂಧಿ ವೆಚ್ಚಗಳಿಗೆ ಆಕಸ್ಮಿಕ ಅನುದಾನವಾಗಿ 50 ಸಾವಿರ ಅಮೆರಿಕನ್ ಡಾಲರ್ ನೆರವು ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 28, 2019
ಅರ್ಜಿ: ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IIF6

***************
ವಿದ್ಯಾರ್ಥಿವೇತನ
(ರಾಷ್ಟ್ರೀಯ ಮಟ್ಟ):

ಭಾರತದ ಸೀನಿಯರ್ ಬಯೋಮೆಡಿಕಲ್ ವಿಜ್ಞಾನಿಗಳಿಗೆ ಐಸಿಎಂಆರ್-ಡಿಎಚ್‌ಆರ್ ಇಂಟರ್‌ನ್ಯಾಷನಲ್ ಫೆಲೊಶಿಪ್ 2019
ವಿವರ:
ಸಂಶೋಧನಾ ಕಾರ್ಯ ಕೈಗೊಳ್ಳಲು ಬಯಸುವ ಅನುಭವಿ ಹಿರಿಯ ವಿಜ್ಞಾನಿಗಳಿಂದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ಡಿಪಾರ್ಟ್‌ಮೆಂಟ್ ಆಫ್ ಹೆಲ್ತ್ ರಿಸರ್ಚ್(ಡಿಎಚ್‌ಆರ್) ಅರ್ಜಿ ಆಹ್ವಾನಿಸಿದೆ.
ಅರ್ಹತೆ:
ಬೋಧಕರಾಗಿ ಅಥವಾ ಸಂಶೋಧಕರಾಗಿ 15 ಅಥವಾ ಹೆಚ್ಚಿನ ವರ್ಷದ ಅನುಭವ ಹೊಂದಿರುವ, ಆರೋಗ್ಯ ಮತ್ತು ಬಯೋಮೆಡಿಕಲ್ ಸಂಶೋಧನಾ ಕ್ಷೇತ್ರದಲ್ಲಿ 3 ಅಥವಾ ಹೆಚ್ಚಿನ ವರ್ಷದ ಅನುಭವ ಹೊಂದಿರುವ (1-3 ತಿಂಗಳ ಫೆಲೋಶಿಪ್), ಎಂಎಸ್, ಎಂಡಿ ಅಥವಾ ಪಿಎಚ್‌ಡಿ ಪದವೀಧರರು (ಭಾರತೀಯರು ಮಾತ್ರ) ಅರ್ಜಿ ಸಲ್ಲಿಸಬಹುದು.
ನೆರವು:
 ಆಯ್ದ ಅಭ್ಯರ್ಥಿಗಳಿಗೆ 6ರಿಂದ 12 ತಿಂಗಳಾವಧಿಗೆ ನಿಗದಿತ ಸಂಶೋಧನಾ ಕಾರ್ಯ ಕೈಗೊಳ್ಳಲು ಅವಕಾಶ ನೀಡಲಾಗುವುದು. ಅಲ್ಲದೆ ತಿಂಗಳಿಗೆ 3 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಸ್ಟೈಪೆಂಡ್, ಸಂಶೋಧನಾ ಸಂಬಂಧಿ ವೆಚ್ಚಗಳಿಗೆ ಆಕಸ್ಮಿಕ ಅನುದಾನವಾಗಿ 50 ಸಾವಿರ ಅಮೆರಿಕನ್ ಡಾಲರ್ ನೆರವು, ಜೀವನ ಭತ್ತೆಗಾಗಿ 200 ಅಮೆರಿಕನ್ ಡಾಲರ್ ನೆರವು ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 28, 2019
ಅರ್ಜಿ:  ಆನ್‌ಲೈನ್ ಮೂಲಕ ಪ್ರಬಂಧ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IIF5

***************
ವಿದ್ಯಾರ್ಥಿವೇತನ
(ಸಂಶೋಧನಾ ಆಧಾರಿತ):

ದಿ ಜೆನ್ ಫೌಂಡೇಶನ್ ಸ್ಕಾಲರ್‌ಶಿಪ್ ಗ್ರಾಂಟ್ 2019
ವಿವರ:
 ಸಂಶೋಧನೆ ನಡೆಸಲು ಆಸಕ್ತಿ ಇರುವ, ನೈಸರ್ಗಿಕ ವಿಜ್ಞಾನ, ಆಹಾರ ವಿಜ್ಞಾನ ವಿಷಯದಲ್ಲಿ ಪದವೀಧರರು ಅಥವಾ ಜಪಾನ್‌ನಲ್ಲಿ ವಿವಿಧ ಸಂಸ್ಕೃತಿಯ ಜನರ ಶಿಕ್ಷಣ ಮಟ್ಟವನ್ನು ಹೆಚ್ಚಿಸುವ ತಂತ್ರಜ್ಞಾನ ಪರಿಣತರಿಂದ ಜಪಾನ್‌ನ ಜೆನ್ ಫೌಂಡೇಶನ್ ಅರ್ಜಿ ಆಹ್ವಾನಿಸಿದೆ.
ಅರ್ಹತೆ:
ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ, ಆಹಾರ ವಿಜ್ಞಾನ ಅಥವಾ ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯಬಯಸುವ ಆಸಕ್ತರು ಅರ್ಜಿ ಸಲ್ಲಿಸಬಹುದು.
ನೆರವು:
ಸ್ಕಾಲರ್‌ಶಿಪ್ ಅನುದಾನವಾಗಿ 500ರಿಂದ 5 ಸಾವಿರ ಗ್ರೇಟ್‌ಬ್ರಿಟನ್ ಪೌಂಡ್ ಆರ್ಥಿಕ ನೆರವು. ಸ್ಕಾಲರ್‌ಶಿಪ್ ಪ್ರೊಜೆಕ್ಟ್‌ಗೆ ನೀಡಲಾಗಿರುವ ಯೋಜನಾ ಪ್ರಸ್ತಾವನೆಯ ಮಹತ್ವದ ಆಧಾರದಲ್ಲಿ ಈ ಮೊತ್ತ ಬದಲಾಗಬಹುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 28, 2019
ಅರ್ಜಿ: ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/TGF3

****************
ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):

ಎಂಪವರ್ ಗ್ಲೋಬಲ್ ಸಿಟಿಜನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2019
ವಿವರ:
 ಎಂಪವರ್ ಸಂಸ್ಥೆಯು ಯುಎಸ್ ಮತ್ತು ಕೆನಡಾದ 200ಕ್ಕೂ ಹೆಚ್ಚು ಸಹಭಾಗಿ ವಿವಿಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುತ್ತಿದೆ. ಇವುಗಳಲ್ಲಿ ಐವಿ ಲೀಗ್ ಶಾಲೆಗಳು, ಯುಎಸ್‌ಸಿ, ಎನ್‌ವೈಯು, ಎಂಐಟಿ, ಕೊಲಂಬಿಯ, ಯುಸಿಎಲ್‌ಎ, ಪೆನ್, ಮಿಷಿಗನ್‌ನಂತಹ ಪ್ರತಿಷ್ಠಿತ ಶಾಲೆಗಳು ಸೇರಿವೆ.
ಅರ್ಹತೆ:
ಕನಿಷ್ಠ 18 ವರ್ಷ ವಯೋಮಾನದ, ಯಾವುದಾದರೂ ಒಂದು ಸಹಭಾಗಿ ವಿವಿಯಲ್ಲಿ ಸ್ವೀಕೃತಗೊಂಡು ನೋಂದಣಿಯಾಗಿರುವ, ಯುಎಸ್/ಕೆನಡಾ ವಿದ್ಯಾರ್ಥಿ ವೀಸಾ ಪಡೆದಿರು ವವರು ಅರ್ಜಿ ಸಲ್ಲಿಸಬಹುದು.
ನೆರವು:
 ಆಯ್ದ ಅಭ್ಯರ್ಥಿಗಳಿಗೆ 5 ಸಾವಿರ ಅಮೆರಿಕನ್ ಡಾಲರ್ ಮೊತ್ತದ ಸ್ಕಾಲರ್‌ಶಿಪ್ ನೀಡಲಾಗುವುದು
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ: ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/MGC1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News