ಮುಷ್ತಾಕ್, ಅಸೀಮಾಗೆ ಹಾಕಿ ಇಂಡಿಯಾ ಅಭಿನಂದನೆ

Update: 2019-02-22 19:01 GMT

ಹೊಸದಿಲ್ಲಿ, ಫೆ.22: ಏಶ್ಯನ್ ಹಾಕಿ ಒಕ್ಕೂಟಕ್ಕೆ ನೂತನವಾಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಾಕಿ ಇಂಡಿಯಾ ಅಧ್ಯಕ್ಷ ಮುಹಮ್ಮದ್ ಮುಷ್ತಾಕ್ ಅಹ್ಮದ್‌ಗೆ ಹಾಕಿ ಇಂಡಿಯಾ ಶುಕ್ರವಾರ ಅಭಿನಂದನೆ ತಿಳಿಸಿದೆ.

ಏಶ್ಯನ್ ಹಾಕಿ ಒಕ್ಕೂಟ ಕಾರ್ಯನಿರ್ವಹಣಾ ಮಂಡಳಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಹಾಕಿ ಇಂಡಿಯಾದ ಉಪಾಧ್ಯಕ್ಷೆ ಅಸೀಮಾ ಅಲಿ ಅವರನ್ನು ಹಾಕಿ ಇಂಡಿಯಾ ಅಭಿನಂದಿಸಿದೆ.

ಅಕ್ಟೋಬರ್ 2018ರಿಂದ ಮಷ್ತಾಕ್ ಅಹ್ಮದ್ ಹಾಕಿ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಅವರು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಜಮ್ಮು ಕಾಶ್ಮೀರದವರಾದ ಅಸೀಮಾ ಅಲಿ ಕೂಡ ಅಕ್ಟೋಬರ್ 2018ರಿಂದ ಹಾಕಿ ಇಂಡಿಯಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಯ್ಕೆ ಕುರಿತು ಮಾತನಾಡಿರುವ ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ರಾಜಿಂದರ್ ಸಿಂಗ್, ‘‘ಹೊಸ ಹುದ್ದೆ ವಹಿಸಿಕೊಂಡಿರುವ ಉಭಯ ಅಧಿಕಾರಿಗಳನ್ನು ಅಭಿನಂದಿಸುವೆನು. ದೇಶದಾದ್ಯಂತ ಹಾಕಿಯ ಪ್ರಚಾರ ಹಾಗೂ ಪಸರಿಸಲು ಇವರಿಬ್ಬರೂ ದಣಿವರಿಯದೆ ಶ್ರಮಿಸಿದ್ದಾರೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News