ಪುಲ್ವಾಮಾ ದಾಳಿ: ವಾರದ ಬಳಿಕ ಬಗ್ಗೆ ಟ್ರಂಪ್ ಹೇಳಿದ್ದೇನು?

Update: 2019-02-23 04:34 GMT

ವಾಷಿಂಗ್ಟನ್, ಫೆ.23: ಭಾರತ ಹಾಗೂ ಪಾಕಿಸ್ತಾನದ ನಡುವೆ ತೀರಾ ಅಪಾಯಕಾರಿ ಪರಿಸ್ಥಿತಿ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಕಾಶ್ಮೀರ ಘಟನೆ ಬಳಿಕ "ಪ್ರಬಲ" ಕ್ರಮ ಕೈಗೊಳ್ಳುವ ಬಗ್ಗೆ ಭಾರತ ಪರಿಶೀಲಿಸುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

"ಎರಡು ದೇಶಗಳ ನಡುವೆ ತೀರಾ ಅಪಾಯಕಾರಿ ಸನ್ನಿವೇಶ ಇದೆ. ಇದಕ್ಕೆ ತಡೆ ಹಾಕಬೇಕು. ಪಾಕಿಸ್ತಾನದ ಜತೆ ಮಾತುಕತೆಗೆ ಅಮೆರಿಕ ಆಗ್ರಹಿಸಿದೆ ಎಂದು ಹೇಳಿದ್ದಾರೆ.

"ಘಟನೆಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ದೊಡ್ಡ ಸಮಸ್ಯೆಗಳು ಉದ್ಭವಿಸಿವೆ" ಎಂದು ಓವಲ್ ಕಚೇರಿಯಲ್ಲಿ ಚೀನಾದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿವರಿಸಿದರು.

ವಿಭಜಿತ ಕಾಶ್ಮೀರದ ಭಾರತ ಪ್ರದೇಶದಲ್ಲಿ ಆತ್ಮಹತ್ಯಾ ದಾಳಿಯಲ್ಲಿ 41 ಸೈನಿಕರು ಮೃತಪಟ್ಟ ಬಳಿಕ ಅಣ್ವಸ್ತ್ರಶಕ್ತ ನೆರೆರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ ಎಂದು ಹೇಳಿದರು.

"ಭಾರತ ತೀರಾ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಒಂದು ದಾಳಿಯಲ್ಲೇ ಸುಮಾರು 50 ಮಂದಿಯನ್ನು ಕಳೆದುಕೊಂಡಿದೆ. ಇದು ನನಗೆ ಅರ್ಥವಾಗುತ್ತಿದೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News