ಭಾರತ –ಪಾಕಿಸ್ತಾನ ನಡುವೆ ಅತ್ಯಂತ ಕೆಟ್ಟ ವಾತಾವರಣ : ಟ್ರಂಪ್

Update: 2019-02-23 06:00 GMT

ವಾಷಿಂಗ್ಟನ್, ಫೆ.23: ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಅತ್ಯಂತ ಕೆಟ್ಟ , ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಮೆರಿಕದ ಅಧ್ಯಕ್ಷ ರೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಉಭಯ ದೇಶಗಳ ನಡುವೆ ನಿರ್ಮಾಣಗೊಂಡಿರುವ  ವಿಷಮ ಸ್ಥಿತಿಯನ್ನು ತಿಳಿಗೊಳಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಅವರು  ಹೇಳಿದರು.

ಪುಲ್ವಾಮದಲ್ಲಿ ಉಗ್ರದ ದಾಳಿಯಲ್ಲಿ ಭಾರತದ 40ಕ್ಕೂ ಅಧಿಕ ಯೋಧರು ಬಲಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ಅವರು ಈ ಘಟನೆ ಬಳಿಕ ಭಾರತ ಮತ್ತಷ್ಟು ಬಲಿಷ್ಠವಾಗಿ  ತಿರುಗೇಟು ನೀಡಲು ನೋಡುತ್ತಿದೆ. ಪುಲ್ವಾಮ ದಾಳಿ ನಿಜಕ್ಕೂ ದುರದೃಷ್ಟಕರ. ಭಾರತ 50 ಯೋಧರನ್ನು ಕಳೆದುಕೊಂಡಿದೆ. ಅಮೆರಿಕ  ಉಭಯ ದೇಶಗಳ ನಡುವಿನ ಸಮಸ್ಯೆಯನ್ನು ಬಗೆಹರಿಸಲು ನೋಡುತ್ತಿದೆ ಎಂದರು.

ಅಮೆರಿಕದಿಂದ ಪಾಕಿಸ್ತಾನವು ವಾರ್ಷಿಕ 1.3 ಬಿಲಿಯನ್ ಡಾಲರ್  ನೆರವು ಪಡೆಯುತ್ತಿತ್ತು .ಇತ್ತೀಚಿನ ವರ್ಷಗಳಲ್ಲಿ ಅಮೆರಿಕದೊಂದಿಗೆ ಪಾಕಿಸ್ತಾನ ಚೆನ್ನಾಗಿ ಸಹಕರಿಸುತ್ತಿಲ್ಲ. ಈ ಕಾರಣದಿಂದಾಗಿ ಪಾಕಿಸ್ತಾನಕ್ಕೆ ನೀಡಲಾಗುವ ನೆರವನ್ನು ಅಮೆರಿಕ ಸ್ಥಗಿತಗೊಳಿಸಿದೆ ಎಂದು ಮಾಹಿತಿ ನೀಡಿದರು. .  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News