ಶೌಕತ್ ಅಲಿ

Update: 2019-02-25 05:45 GMT

ಮಂಗಳೂರು, ಫೆ. 25: ಮೂಲತಃ ಮುಲ್ಕಿ - ಕೊಳಚೆಕಂಬಳ ನಿವಾಸಿ, ದಿ. ಮುಹಮ್ಮದ್ ಮುಲ್ಕಿ ಅವರ ಪುತ್ರ ಶೌಕತ್ ಅಲಿ (52) ಕಂಕನಾಡಿಯ ನಿವಾಸದಲ್ಲಿ ಸೋಮವಾರ ಬೆಳಗ್ಗೆ ನಿಧನರಾದರು.

ಮೃತರು ಓಶಿಯನ್ ಕನ್ ಸ್ಟ್ರಕ್ಷನ್ ನ ಮುಲ್ಕಿ ಇನಾಯತ್ ಅಲಿ ಅವರ ಹಿರಿಯ ಸಹೋದರ. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಇಂದು ಸಂಜೆ ಮುಲ್ಕಿ ಕೇಂದ್ರ ಮಸೀದಿ ವಠಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ