ಪಾಕ್ ಮೇಲಿನ ವಾಯುದಾಳಿಯದ್ದು ಎನ್ನಲಾಗಿರುವ ವೀಡಿಯೊ ನಕಲಿ.....!

Update: 2019-02-26 18:47 GMT

ಹೊಸದಿಲ್ಲಿ,ಫೆ.26: ಮಂಗಳವಾರ ನಸುಕಿನಲ್ಲಿ ಪಾಕಿಸ್ತಾನದ ಬಾಲಕೋಟ್‌ನಲ್ಲಿಯ ಉಗ್ರರ ಶಿಬಿರಗಳ ಮೇಲೆ ನಡೆದ ವಾಯುದಾಳಿಯದ್ದು ಎಂಬ ಹಣೆಪಟ್ಟಿ ಹಚ್ಚಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ವೀಡಿಯೋ ನಕಲಿ ಎನ್ನುವುದು ದೃಢಪಟ್ಟಿದೆ. ಈ ದೃಶ್ಯಾವಳಿ 2015ರಲ್ಲಿ ಬಿಡುಗಡೆಗೊಂಡಿದ್ದ ‘ಆರ್ಮಾ 2’ ಎಂಬ ವೀಡಿಯೊ ಗೇಮ್‌ನದ್ದು ಎನ್ನುವುದು ಬೆಳಕಿಗೆ ಬಂದಿದೆ.

#ಈ ವೀಡಿಯೊ ಗೇಮ್‌ನ್ನು 2015,ಜುಲೈ 9ರಂದು ‘ರಿಯಲಿ ಶಾರ್ಟ್ ಎಂಗೇಜ್‌ಮೆಂಟ್ (ಎಫ್‌ಟಿ.ತಾಲಿಬಾನ್)-ಅಪಾಚೆ ಗನ್ನರ್ ಎಫ್‌ಎಲ್‌ಐಆರ್ ಕ್ಯಾಮ್ 6-ಆರ್ಮಾ 2 ’ ಅಡಿಬರಹದೊಡನೆ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಮೈಕ್ರೋಸಾಫ್ಟ್ ವಿಂಡೋಸ್‌ಗಾಗಿ ಬೊಹೆಮಾ ಇಂಟರ್‌ಆ್ಯಕ್ಟಿವ್ ಇದನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News