ನಾವು ಭಾರತದ ಎರಡು ಯುದ್ಧ ವಿಮಾನ ಪತನಗೊಳಿಸಿದ್ದೇವೆ: ಪಾಕ್

Update: 2019-02-27 09:07 GMT

ಕರಾಚಿ, ಫೆ.27: ಪಾಕಿಸ್ತಾನದ ವಾಯು ಸೀಮೆ ಒಳಗೆ ಪ್ರವೇಶಿಸಿದ್ದ ಭಾರತದ ಎರಡು ಯುದ್ಧ ವಿಮಾನವನ್ನು ಪಾಕಿಸ್ತಾನ ವಾಯು ಸೇನೆ ಇಂದು ಬೆಳಗ್ಗೆ ಹೊಡೆದುರುಳಿಸಿ, ಓರ್ವ ಭಾರತೀಯ ಪೈಲಟ್‌ನನ್ನು ಬಂಧಿಸಿದೆ ಎಂದು ಪಾಕಿಸ್ತಾನ ಶಸ್ತ್ರಾಸ್ತ್ರ ಪಡೆಗಳ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.

ಪಾಕ್ ನಮ್ಮ ವಿಮಾನವನ್ನು ಹೊಡೆದುರುಳಿಸಿಲ್ಲ: ಭಾರತ ಸ್ಪಷ್ಟನೆ

ಭಾರತೀಯ ಯುದ್ಧ ವಿಮಾನವನ್ನು ಹೊಡೆದು ಉರುಳಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಇಂದು ನಿರಾಕರಿಸಿರುವ ಭಾರತ ನಮ್ಮ ಎಲ್ಲ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News