ಕಾಡ್ಗಿಚ್ಚು: ಬಂಡೀಪುರದಲ್ಲಿ ಮುಖ್ಯಮಂತ್ರಿಯಿಂದ ವೈಮಾನಿಕ ಸಮೀಕ್ಷೆ

Update: 2019-02-27 09:01 GMT

ಚಾಮರಾಜನಗರ, ಫೆ.27: ರಾಜ್ಯದ ವಿಶ್ವ ವಿಖ್ಯಾತ ಹುಲಿ ಸಂರಕ್ಷಿತ ಅಭಯಾರಣ್ಯ ಬಂಡೀಪುರದಲ್ಲಿ ಕಳೆದ ಕೆಲವು ದಿನಗಳಲ್ಲಿ ಉಂಟಾಗಿದ್ದ ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದರು.

ಕಾಡ್ಗಿಚ್ಚಿನಿಂದ ತತ್ತರಿಸಿರುವ ಬಂಡೀಪುರ ಹಾಗೂ ಹಿಮವತ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿದರು.

ಐದಾರು ದಿನಗಳಲ್ಲಿ ಬಂಡೀಪುರ ಅಭಯಾರಣ್ಯ ಮಾತ್ರವಲ್ಲ ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು, ಮಸಣಗುಡಿ ಭಾಗದಲ್ಲಿ ಹಾಗು ಗೋಪಾಲಸ್ವಾಮಿ ಬೆಟ್ಟದ ಮೂಲಕವಾಗಿ ಮೂಲೆಹೊಳೆಯ ಟೈಗರ್ ರೇಂಜ್ ಪಕ್ಕ ಇರುವ ಮೂಲೆಹೊಳೆಯ ಕೇರಳದ ಗಡಿಯವರೆಗೆ ಬೆಂಕಿ ವ್ಯಾಪ್ಯಿಸಿತ್ತು. ಸಾವಿರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News