ಅಡಗುದಾಣ ಪ್ರಜ್ಞೆಯಾಳದ ಆರ್ದ್ರ ಕಾವ್ಯ

Update: 2019-02-27 18:38 GMT

ಎಂ.ಡಿ. ಒಕ್ಕುಂದ ಅವರು ಯಾವತ್ತೂ ವೈಚಾರಿಕ ಎಚ್ಚರದ ಧ್ವನಿಯಾಗಿದ್ದಾರೆ. ತಮ್ಮ ಪ್ರಖರ ವೈಚಾರಿಕೆಯ ಸ್ಪಷ್ಟತೆಯ ಬರಹ ಹಾಗೂ ಕವಿತೆಗಳ ಮೂಲಕ ಹೆಸರು ಮಾಡಿದವರು. ಒಟ್ಟು 56 ಕವಿತೆಗಳಿರುವ ಅವರ ‘ಅಡಗುದಾಣ’ ಕವನ ಸಂಕಲನ, ಮನಮುಟ್ಟುವ ಸರಳ, ನೇರ ಭಾವತುಂಬಿದ ಆರ್ದ್ರ ಕವಿತೆಗಳ ಗುಚ್ಛ. ವೈಚಾರಿಕ ವಿವೇಕವನ್ನು ಎಚ್ಚರಿಸುವ ಹೊಲೆಯರ ಗಡಗಡೆ’ ಜಾತಿ ವ್ಯವಸ್ಥೆಯ ವ್ಯಸನವನ್ನು ಪೋಷಿಸಿದ ವ್ಯವಸ್ಥೆಯನ್ನು ಪಿಸುದನಿಯಲ್ಲಿ ಪ್ರಶ್ನಿಸುತ್ತದೆ. ಇದೇ ರೀತಿ ಬಡತನ ಕುರಿತ ಕವಿತೆ ‘ಹಸಿವು ಬತ್ತಲೆ ಮತ್ತು ಕವಿತೆ’ ಕವನ ಗಮನ ಸೆಳೆಯುತ್ತದೆ. ಇವರ ಕವಿತೆಗಳಲ್ಲಿಯ ಪಾಯಿಖಾನೆಯ ಕೆಲಸದ ಹುಡುಗನ ‘ಮರಳಿ ಬರುವನೇ ಪೋರ ಚಿತ್ರ ಮುಗಿಸುವನೇ?’ ಹೊಲೆಯರ ಗಡಗಡೆ’, ಕಸಬರಿಗೆ’, ‘ನೋವು’, ಹಸಿವು ಬತ್ತಲೆ ಮತ್ತು ಕವಿತೆ’, ಸಾವು, ಹಸಿವು’ ಮುಂತಾದ ಕವಿತೆಗಳು ಬಡತನ, ಜಾತಿವ್ಯವಸ್ಥೆ ಕುರಿತ ಕವನಗಳಿವೆ. ಇದನ್ನು ಬಿಟ್ಟರೆ ಹೆಚ್ಚಾಗಿ ಬರುವುದು ಯುದ್ಧ ಕುರಿತ ಕವನಗಳು. ಮಾಡಿದರೆ ಮಾಡಬೇಕು ಅಂಥ ಯುದ್ಧ’, ಕ್ರಾಂತಿ ಕೂಸು ಮುಂತಾದ ಕವಿತೆಗಳಿವೆ. ಒಂದು ವಿಶಿಷ್ಟ ಪ್ರೇಮ ಕವಿತೆ ‘ಪ್ರೇಮದ ಕೊಲೆ ಅಜರಾಮರ’ ಕವಿತೆಯ ಸಾಲು ಗಮನ ಸೆಳೆಯುತ್ತದೆ. ‘‘ಮಸೀದಿಯ ದಾರಿಯಲಿ/ಅವನ ನೋವು ಆಕಾಶವಾಯಿತು/ಗರ್ಭಗುಡಿಯ ಒಳಗೇ/ ಅವಳ ಕಣ್ಣೀರು ಕಡಲಾಯಿತು. ಹೀಗೆ ಜಾತಿ ಧರ್ಮದ ಗಡಿಗಳನ್ನು ಮೀರಿದ ಅಪ್ಪಟ ಮನುಷ್ಯ ಈ ಕವನ ಸಂಕಲನ.
ಪಲ್ಲವ ಪ್ರಕಾಶನದವರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು114, ಬೆಲೆ ರೂ. 100 ಆಸಕ್ತರು ಈ ಸಂಖ್ಯೆಗೆ ಕರೆ ಮಾಡಬಹುದು.-9480353507

Writer - ಡಾ. ಕೆ. ಶರೀಫಾ

contributor

Editor - ಡಾ. ಕೆ. ಶರೀಫಾ

contributor

Similar News