ಮಲೈಮಹದೇಶ್ವರ ಬೆಟ್ಟದ ಅಂಗಡಿ ಮಳಿಗೆಗಳ ಹರಾಜಿಗೆ ವಿರೋಧ: ಮುಂದುವರಿದ ಪ್ರತಿಭಟನೆ

Update: 2019-02-28 05:56 GMT

ಹನೂರು, ಫೆ.28: ಮಲೈಮಹದೇಶ್ವರ ಬೆಟ್ಟದಲ್ಲಿ ಮಲೈಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ವಿರೋಧಿಸಿ ರಸ್ತೆ ಬದಿ ವ್ಯಾಪಾಸ್ಥರು ನೆಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಗುರುವಾರವು ಸಹ ಮುಂದುವರಿದಿದೆ.

ಮಲೈಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ 90 ಅಂಗಡಿ ಮಳಿಗೆಗಳನ್ನು ಇದೀಗ ಬಹಿರಂಗ ಹರಾಜಿಗಿಡುವ ಮೂಲಕ ಅಲ್ಲಿ ವ್ಯಾಪಾರ ಮಾಡುತ್ತಿರುವ ಸ್ಥಳೀಯ ವ್ಯಾಪಾರಸ್ಥರನ್ನು ವ್ಯವಸ್ಥಿತವಾಗಿ ಹೊರದಬ್ಬಲು ಪ್ರಾಧಿಕಾರ ಮುಂದಾಗಿದೆ ಎಂದು ಅರೋಪಿಸಿ ರಸ್ತೆ ಬದಿ ವ್ಯಾಪಾರಸ್ಥರು ಸಂಘವು ಮಲೈಮಹದೇಶ್ವರ ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ಕಚೇರಿ ಮುಂಭಾಗದಲ್ಲಿ ಬುಧವಾರದಿಂದ ಅನಿರ್ಧಿಷ್ಟಾವಧಿ ಪ್ರತಿಟನೆ ಹಮ್ಮಿಕೂಂಡಿದೆ.

ಈ ವೇಳೆ ಪ್ರಾಧಿಕಾರದ ಕಚೇರಿ ಮುಂಬಾಗ ನೂರಾರು ಸಂಖ್ಯೆಯ ಸಣ್ಣ ವ್ಯಾಪಾರಸ್ಥರು, ರಸ್ತೆ ಬದಿ ವ್ಯಾಪಾರಿಗಳು ಮತ್ತು ಮಹಿಳಾ ಸಂಘಟನೆಗಳು ಜಮಾಯಿಸಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಟನೆಯಲ್ಲಿ ನಿರತರಾಗಿದ್ದರು. ಮುಷ್ಕರ ಇಂದೂ ಸಹ ಮುಂದುವರಿದಿದೆ.

 ಈ ಸಂದರ್ಭ ಸೇಂಟ್ರಲ್ ಆಫ್ ಟ್ರೇಡ್ ಯೂನಿಯನ್ ರಾಜ್ಯ ಸಮಿತಿಯ ಸದಸ್ಯರಾದ ರಾಮಕೃಷ್ಣ, ದಲಿತ ಅಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ನಿಂಗಣ್ಣಯ್ಯ, ಮಾಜಿ ಗ್ರಾಪಂ ಸದಸ್ಯ ಡಿ.ಆರ್.ಮಾದೇಶ್, ಬೆಟ್ಟದ ರಸ್ತೆ ಬದಿ ವ್ಯಾಪಾರಿ ಸಂಘಗಳ ಉಪಾದ್ಯಕ್ಷ ಡಿ.ಈಶ, ಕಾರ್ಯದರ್ಶಿ ಗೋವಿಂದಪ್ಪಸೇರಿದಂತೆ ಹಲವು ಮಹಿಳೆ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News