ಶಿವರಾತ್ರಿ ಜಾತ್ರಾ ಮಹೋತ್ಸವ: ಮಲೈಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದೆ ಭಕ್ತರ ದಂಡು

Update: 2019-03-02 06:39 GMT

ಹನೂರು, ಮಾ.2: ಶಿವರಾತ್ರಿ ಹಬ್ಬದ ಪ್ರಯುಕ್ತ ರಾಮನಗರ ಜಿಲ್ಲೆಯ ಏಳಗಳ್ಳಿ ಸಮೀಪದ ಬಸವನಕಡದ ಕಾವೇರಿ ನದಿಯನ್ನು ದಾಡಿ ದಟ್ಟ ಕಾನನದ ನಡುವೆ ಸಾವಿರಾರು ಮಂದಿ ಕಾಲ್ನಡಿಗೆಯಲ್ಲಿ ಮಲೈಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.

ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದಲ್ಲಿ 4 ದಿನಗಳ ಕಾಲ ನಡೆಯುವ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೂ ಮುನ್ನ ರಾಜ್ಯದ ನಾನಾ ಜಿಲ್ಲೆಗಳಿಂದ ಮಲೈಮಹದೇಶ್ವರನಿಗೆ ಹರಕೆ ಹೂತ್ತ ಭಕ್ತರೂ ತಮ್ಮ ಹರಕೆ ತೀರಿಸಲು ಪಾದಯಾತ್ರೆ ಮುಖಾಂತರ ಆಗಮಿಸುತ್ತಿದ್ದಾರೆ. ದಟಾರಣ್ಯದ ನಡುವೆ ಬರಿಗಾಲಲ್ಲಿ ಮಾದಪ್ಪನ ಸನ್ನಿದ್ದಿಯ ಕಡೆ ಮಾದಪ್ಪನ ಭಕ್ತಿ ಗೀತೆಗಳನ್ನು ಜಪಿಸಿ ನಡೆದು ಬರುತ್ತಿದ್ದಾರೆ.ಇವರಿಗೆ ಯಾವುದೇ ತೂಂದರೆಯಾಗದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಸುಳ್ವಾಡಿ ವಿಷ ಪ್ರಸಾದ ದುರಂತದಿಂದ ಅನ್ನಸಂತರ್ಪಣೆಗೆ ಹಿಂದೇಟು
ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುವ ಜನರಿಗೆ ಪ್ರತಿ ಸಲವೂ ಸ್ಥಳೀಯರು ಮಾರ್ಗದ ಉದ್ದಕ್ಕೂ ತಂಪು ಪಾನೀಯ, ಅನ್ನ ಸಂತರ್ಪಣೆ ಮಾಡುತ್ತಿದ್ದರು. ಅಲ್ಲಲ್ಲಿ ಶಾಮಿಯಾನ ಹಾಕಿ ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದರು. ಆದರೆ ಹನೂರು ತಾಲೂಕಿನ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮನ ದೇವಸ್ಥಾನದ ವಿಷಪ್ರಸಾದದ ದುರಂತದ ಹಿನ್ನೆಲೆಯಲ್ಲಿ ಈ ಭಾರಿ ಮಾದಪ್ಪನ ಭಕ್ತರಿಗೆ ಅನ್ನ ಸಂತರ್ಪಣೆ ಮಾಡುವವರ ಸಂಖ್ಯೆ ಕೂಂಚ ಇಳಿಮುಖವಾಗಿದೆ. ಈ ಬಗ್ಗೆ ರಾಮನಗರ ಜಿಲ್ಲೆಯ ಹರಚಕರಹಳ್ಳಿ, ಬೈರಮಂಗಲ, ಹಿಟಮಡ, ಭನ್ನಿಕುಪ್ಪೆಗ್ರಾಮದ ಮಾದಪ್ಪನ ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.


ನಾನು 8 ವರ್ಷಗಳಿಂದ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸುತ್ತಿದ್ದೇನೆ. ಪ್ರತಿ ಭಾರಿಯೂ ಸ್ಥಳೀಯರು ನಮಗೆ ಊಟೋಪಚಾರ ನೀಡಿ ಸತ್ಕರಿಸುತ್ತಿದ್ದರು. ಆದರೆ ಈ ಬಾರಿ ಸುಳ್ವಾಡಿ ದುರಂತದ ಹಿನ್ನೆಲೆಯಲ್ಲಿ ಅನ್ನಸಂತರ್ಪಣೆ ಮಾಡಲು ಹಿಂದೇಟು ಹಾಕಿದ್ದಾರೆ. ಇದರಿಂದ ನಮಗೆ ತುಂಬಾ ಸಮಸ್ಯೆಯಾಗಿದೆ. ಮುಂದಿನ ವರ್ಷದಿಂದ ಪಾದಯಾತ್ರೆಗಳಿಗೆ ಸರ್ಕಾರದಿಂದಾರೂ ಊಟದ ವ್ಯವಸ್ಥೆ ಕಲ್ಪಿಸಿದರೆ ಉತ್ತಮ.
-ಷಣ್ಮುಗ, ಕನ್ನಡಿಗ ಬಿಡ


ರಾಮನಗರ ಜಿಲ್ಲೆಯ ಏಳ್ಳನಹಳ್ಳಿ ಸಮೀಪದ ಬಸವನಕಡದ ಕಾವೇರಿ ನದಿಯನ್ನು ದಾಟಿ ಮಾದಪ್ಪನ ಸನ್ನಿಧಿಗೆ 5 ವರ್ಷಗಳಿಂದ ನಾನು ಆಗಮಿಸುತ್ತಿದ್ದೇನೆ. ಆದರೆ ಈ ಬಾರಿ ನದಿಯಲ್ಲಿ ಸ್ವಲ್ಪಮಟ್ಟಿಗೆ ನೀರು ಹೆಚ್ಚಳವಾಗಿರುವುದರಿಂದ ಸಣ್ಣ ಪುಟ್ಟ ಮಕ್ಕಳುನ್ನು ಜೊತೆಗೆ ಕರೆದುಕೂಂಡು ಬಂದವರು ನದಿ ದಾಟಲು ತುಂಬಾ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ಜಾತ್ರೆಯ ಸಮಯದಲ್ಲಿ ಈ ನದಿ ದಾಟಲು ಸೂಕ್ತ ಕ್ರಮ ತೆಗೆದುಕೂಳ್ಳಲು ಸರ್ಕಾರ ಮುಂದಾಗಬೇಕು

-ಶಶಿದೇವಮ್ಮ ಭನ್ನಿಕೂಪ್ಪೆ ನಿವಾಸಿ 

Writer - ಅಭಿಲಾಷ್ ಗೌಡ

contributor

Editor - ಅಭಿಲಾಷ್ ಗೌಡ

contributor

Similar News