ದಿಲ್ಲಿಯಲ್ಲಿ ಸರಕಾರಿ ಕಟ್ಟಡದಲ್ಲಿ ಬೆಂಕಿ

Update: 2019-03-06 05:22 GMT

ಹೊಸದಿಲ್ಲಿ, ಮಾ.6: ರಾಜಧಾನಿ ದಿಲ್ಲಿಯ ಜಿಜಿಒ ಕಾಂಪ್ಲೆಕ್ಸ್ ನಲ್ಲಿರುವ  ಸರಕಾರದ ಹಲವು ಇಲಾಖಾ ಕಚೇರಿಗಳನ್ನು ಹೊಂದಿರುವ ದೀನ್ ದಯಾಳ್ ಅಂತ್ಯೋದಯ ಭವನದಲ್ಲಿ ಇಂದು ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕಚೇರಿಗಳಲ್ಲಿ ಹಲವು ಕಡತಗಳು ಬೆಂಕಿಯಿಂದ ಸುಟ್ಟು ಭಸ್ಮವಾಗಿದೆ.

ಬೆಳಗ್ಗೆ 8:00 ಗಂಟೆಯ ಹೊತ್ತಿಗೆ ಕಟ್ಟಡದ ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಸುತ್ತಲೂ ವ್ಯಾಪಿಸಿತು ಎನ್ನಲಾಗಿದೆ. ಈ ಘಟನೆಯಿಂದ ಸಾವು ನೋವು ಸಂಭವಿಸಿರುವ  ಬಗ್ಗೆ ವರದಿಯಾಗಿಲ್ಲ. ರಕ್ಷಣಾ ಕಾರ್ಯ ಮುಂದುವರಿದಿದೆ. ಅಗ್ನಿ ಶಾಮಕ ದಳದ 24 ವಾಹನಗಳು ಬೆಂಕಿಯನ್ನು ನಂದಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ  ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News