ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಹಕಾರ: ಝೆರಾಕ್ಸ್ ಅಂಗಡಿಗೆ ಪೊಲೀಸ್ ದಾಳಿ

Update: 2019-03-07 10:40 GMT

ವಿಜಯಪುರ, ಮಾ.7: ನಗರದ ಅಂಜುಮನ್ ಕಾಲೇಜು ಬಳಿ ಕಾರ್ಯಾಚರಿಸುತ್ತಿದ್ದ ಝೆರಾಕ್ಸ್ ಅಂಗಡಿಯೊಂದರ ಮೇಲೆ ದಾಳಿ ಪೊಲೀಸರು ದಾಳಿ ನಡೆಸಿದ್ದು, ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಪೂರಕವಾಗುವಂತಹ ನೂರಾರು ಮೈಕ್ರೋ ಝರಾಕ್ಸ್ ಪ್ರತಿಗಳನ್ನು ವಶಕ್ಕೆ ಪಡೆದಿದ್ದಾರೆ.

  ಡಿವೈಎಸ್ಪಿಡಿ.ಅಶೋಕ್ ನೇತೃತ್ವದಲ್ಲಿ ದಾಳಿ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಝರಾಕ್ಸ್ ಸೆಂಟರ್ ಮಾಲಕ ಸಹಕರಿಸುತ್ತಿದ್ದ ಎಂಬ ಮಾಹಿತಿಯ ಆಧಾರದ ಮೇಲೆ ಈ ದಾಳಿ ಮಾಡಲಾಗಿದೆ. ಅಂಗಡಿ ಮಾಲಕ ಪರಾರಿಯಾಗಿದ್ದಾನೆ. ದಾಳಿಯ ವೇಳೆ ಪಿಯು ಪುಸ್ತಕಗಳ ಮೈಕ್ರೊ ಝರಾಕ್ಸ್ ಪ್ರತಿಗಳು ಪತ್ತೆಯಾಗಿವೆ.

ಝರಾಕ್ಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೊತೆಗೆ ಝರಾಕ್ಸ್ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News