ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-03-08 18:34 GMT

ವಿದ್ಯಾರ್ಥಿವೇತನ

(ರಾಜ್ಯ ಮಟ್ಟ):
 ಸಮಗ್ರ ಶಿಕ್ಷಣ ಕರ್ನಾಟಕ ಫೆಲೊಶಿಪ್ 2019-20

ವಿವರ: ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯು, ರಾಜ್ಯದ ಸಾಕ್ಷರತಾ ಮಟ್ಟ ಹೆಚ್ಚಿಸುವ ಉದ್ದೇಶದ ರಾಜ್ಯ ಸರಕಾರದ ಸಾಕ್ಷರತಾ ಯೋಜನೆಗಳ ಮೇಲುಸ್ತುವಾರಿ ಮತ್ತು ನಿರ್ವಹಣೆ ನಡೆಸಲು ಸಮಾಜ ವಿಜ್ಞಾನ ಮತ್ತು ಸಾರ್ವಜನಿಕ ನೀತಿ ವಿಷಯದಲ್ಲಿ ಅರ್ಹ ವೃತ್ತಿಪರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರು ಮಾಸಿಕ ಸ್ಟೈಪೆಂಡರಿ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತಾರೆ.
ಅರ್ಹತೆ: 35 ವರ್ಷದೊಳಗಿನ ಸ್ನಾತಕೋತ್ತರ ಪದವೀಧರರು, ಸಮಾಜ ವಿಜ್ಞಾನ ಅಥವಾ ಸಾರ್ವಜನಿಕ ನೀತಿ ವಿಷಯದಲ್ಲಿ ಪದವೀಧರರು ಅಥವಾ ವೃತ್ತಿಪರರು ಅರ್ಜಿ ಸಲ್ಲಿಸಬಹುದು. 3ರಿಂದ 10 ವರ್ಷದ ಅನುಭವ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ 2 ವರ್ಷದ ಅವಧಿಗೆ 70 ಸಾವಿರ ರೂ. ಮಾಸಿಕ ಸ್ಟೈಪೆಂಡ್ (ಶೈಕ್ಷಣಿಕ ಸಾಧನೆ ಆಧಾರದಲ್ಲಿ ವಾರ್ಷಿಕವಾಗಿ ಶೇ.10ರಷ್ಟು ಹೆಚ್ಚಳವಾಗುವ ಅವಕಾಶವಿದೆ) ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 18, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/SSK1

****************************
ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ತೈವಾನ್ ಐಸಿಡಿಎಫ್ ಇಂಟರ್‌ನ್ಯಾಷನಲ್ ಹೈಯರ್ ಎಜುಕೇಶನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2019

ವಿವರ: ತೈವಾನ್‌ನ ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಹಕಾರ ನಿಧಿ(ಐಸಿಡಿಎಫ್), ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಲು ಆಸಕ್ತರಾಗಿರುವ ಭಾರತದ ವಿದ್ಯಾರ್ಥಿಗಳಿಗೆ, ತೈವಾನ್‌ನ ಸಹಯೋಗಿ ವಿವಿಗಳಲ್ಲಿ ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಪಡೆಯಲು ಸ್ಕಾಲರ್‌ಶಿಪ್, ಮಾಸಿಕ ಭತ್ತೆ ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತದೆ.
ಅರ್ಹತೆ: ಪದವಿ, ಸ್ನಾತಕೋತ್ತರ, ಪಿಎಚ್‌ಡಿ ಅಧ್ಯಯನಕ್ಕೆ ಅಗತ್ಯ ವಿದ್ಯಾರ್ಹತೆ, ವೀಸಾ ಹಾಗೂ ತೈವಾನ್‌ನ ರಾಷ್ಟ್ರೀಯ ವಲಸೆ ಏಜೆನ್ಸಿಯ ಅನುಸಾರ ವಲಸೆ ದಾಖಲೆ ಪತ್ರ ಹೊಂದಿರುವವರು ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕ ಸಂಪೂರ್ಣ ಮನ್ನಾದ ಜೊತೆಗೆ ತಿಂಗಳಿಗೆ 17 ಸಾವಿರ ತೈವಾನ್ ಡಾಲರ್ ಮೊತ್ತದ ಸ್ಟೈಪೆಂಡ್ ನೀಡಲಾಗುವುದು. ಒಂದು ಬಾರಿ ಪ್ರಯಾಣದ ವಿಮಾನ ದರ, ವಸತಿ ಸೌಲಭ್ಯ, ವಿಮಾ ಸೌಲಭ್ಯ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 15, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ:  http://www.b4s.in/bharati/T115

*******************************

ವಿದ್ಯಾರ್ಥಿವೇತನ
(ರಾಷ್ಟ್ರೀಯ ಮಟ್ಟ):
‘ಗ್ರೀನ್ ಗ್ರಾಸ್‌ರೂಟ್ 2018’ರ 11ನೇ ರಾಷ್ಟ್ರೀಯ ದ್ವೈವಾರ್ಷಿಕ ಸ್ಪರ್ಧೆ

ವಿವರ: ನ್ಯಾಷನಲ್ ಇನೊವೇಷನ್ ಫೌಂಡೇಶನ್ ಹಾಗೂ ಭಾರತ ಸರಕಾರದ ಡಿಎಸ್‌ಟಿ ವಿಭಾಗವು ಇಂಧನ ಸುರಕ್ಷೆ, ಉತ್ಪಾದಕತೆ ಹಾಗೂ ಇತರ ಸಾಮಾಜಿಕ ಕ್ಷೇತ್ರಗಳಿಗೆ ಕೊಡುಗೆ ನೀಡುವಂತಹ ತಾಂತ್ರಿಕ ಯೋಜನೆಗಳನ್ನು ಪ್ರಸ್ತುತ ಪಡಿಸಲು ಯುವ ಸಂಶೋಧಕರಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಯೋಜನೆಗಳಿಗೆ ನಗದು ಬಹುಮಾನ ನೀಡಲಾಗುವುದು ಹಾಗೂ ರಾಷ್ಟ್ರೀಯ/ಅಂತರ್‌ರಾಷ್ಟ್ರೀಯ ಮಾಧ್ಯಮಗಳಲ್ಲಿ ಇವನ್ನು ಪ್ರಕಟಿಸಲಾಗುವುದು.
ಅರ್ಹತೆ: ಸುಸ್ಥಿರ ಪರಿಸರ ಅಭಿವೃದ್ಧಿ ನಿಟ್ಟಿನಲ್ಲಿ ನೂತನ ಕಲ್ಪನೆ ಹೊಂದಿರುವ, 12ನೇ ತರಗತಿ ಅರ್ಹತೆ ಇರುವ ಸಂಶೋಧಕರು ಅಥವಾ ಸಂಶೋಧಕರ ತಂಡ, ಕುಶಲಕರ್ಮಿಗಳು, ಕೊಳೆಗೇರಿ ನಿವಾಸಿಗಳು, ವಿದ್ಯಾರ್ಥಿಗಳು, ಮೆಕ್ಯಾನಿಕ್‌ಗಳು ತಮ್ಮ ಪ್ರೊಜೆಕ್ಟ್ ನೊಂದಿಗೆ ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಷ್ಟ್ರೀಯ ರ್ಯಾಂಕಿಂಗ್ ನಮೂದಿಗೆ 1 ಲಕ್ಷ ರೂ.ಯಿಂದ 7.5 ಲಕ್ಷ ರೂ.ವರೆಗಿನ ಮೊತ್ತ ನೀಡಲಾಗುವುದು. ಗಮನಾರ್ಹ ಕೊಡುಗೆ ನೀಡಿದವರಿಗೆ 10 ಸಾವಿರ ರೂ. ಮೊತ್ತದ ಸಮಾಧಾನಕರ ಬಹುಮಾನ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆಫ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/NBC4

*******************

ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
 ಫಾಸೀ ಸಮ್ಮರ್ ಫೆಲೋಶಿಪ್ 2019

ವಿವರ: ಎಂಎಚ್‌ಆರ್‌ಡಿಯ ಅಭಿಯಾನವಾದ ಫಾಸೀ (ಫ್ರೀ ಆ್ಯಂಡ್ ಓಪನ್ ಸೋರ್ಸ್ ಸಾಪ್ಟ್‌ವ್ಯಾರ್ ಇನ್ ಎಜುಕೇಶನ್) ಸಮ್ಮರ್ ಫೆಲೋಶಿಪ್ ನೀಡುತ್ತಿದ್ದು ಎಫ್‌ಒಎಸ್‌ಎಸ್ ಸಾಧನಗಳಾದ ಪೈಥಾನ್, ಡ್ರುಪಲ್, ಬ್ಲೆಂಡರ್, ಕೋಹ, ಸಿಂಫಿಗ್ ಇತ್ಯಾದಿಗಳ ಬಗ್ಗೆ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಹತೆ: ಇಂಜಿನಿಯರಿಂಗ್ ಸೈಯನ್ಸ್, ಕಾಮರ್ಸ್ ವಿಭಾಗದ ಪದವಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳು.
 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಗೆ ಕ್ಯಾಂಪಸ್ ವ್ಯವಸ್ಥೆ, ಇಂಟರ್ನ್‌ಶಿಪ್, ಉದ್ಯೋಗ ಅಥವಾ ಉನ್ನತ ಅಧ್ಯಯನಕ್ಕೆ ಶೈಕ್ಷಣಿಕ ಸಹಾಯ ಒದಗಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 12, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/FSF6

*********************

ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
ಬಯೊಟೆಕ್ನಾಲಜಿ ಆ್ಯಂಡ್ ಮೆಡಿಕಲ್ ಇಂಜಿನಿಯರಿಂಗ್ ಜ್ಯೂನಿಯರ್ ರಿಸರ್ಚ್ ಫೆಲೋ, ಎನ್‌ಐಟಿ ರೂರ್ಕೆಲಾ 2019.

ವಿವರ: ಎನ್‌ಐಟಿ ರೂರ್ಕೆಲಾವು ಬಯೊಟೆಕ್ನಾಲಜಿ ಮತ್ತು ಮೆಡಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಜ್ಯೂನಿಯರ್ ರಿಸರ್ಚ್ ಫೆಲೋಗಳಾಗಿ 3 ವರ್ಷದ ಸಂಶೋಧನೆ ನಡೆಸಲು ಬಿಟೆಕ್ ಮತ್ತು ಎಂಟೆಕ್ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದೆ. ಪೆಲೋಗಳಿಗೆ ಆರ್ಥಿಕ ಹಾಗೂ ಇತರ ಸೌಲಭ್ಯ ಒದಗಿಸಲಾಗುವುದು.
ಅರ್ಹತೆ: ಬಯೊಟೆಕ್ನಾಲಜಿ ಅಥವಾ ಸಂಬಂಧಿತ ವಿಷಯಗಳಲ್ಲಿ ಬಿಟೆಕ್/ ಬಿಇ ಪದವೀಧರರು (ಕನಿಷ್ಠ ಶೇ.75ರಷ್ಟು ಅಂಕ), ಅಥವಾ ಎಂಟೆಕ್/ಎಂಇ (ಕನಿಷ್ಠ ಶೇ.60 ಅಂಕ) ಗಳಿಸಿರುವ ವಿದ್ಯಾರ್ಥಿಗಳು.
ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಥಮ ಮತ್ತು ದ್ವಿತೀಯ ವರ್ಷ ತಿಂಗಳಿಗೆ 25 ಸಾವಿರ ರೂ., ಮೂರನೇ ವರ್ಷ ತಿಂಗಳಿಗೆ 28 ಸಾವಿರ ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 12, 2019
ಅರ್ಜಿ:  ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/BAM3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News