ಮಡಿಕೇರಿ: ಮಾ.23, 24 ರಂದು ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯ ಎನ್ಲಝರ್ ಫೆಸ್ಟ್

Update: 2019-03-08 18:36 GMT

ಮಡಿಕೇರಿ, ಮಾ.8: ನಾಪೋಕ್ಲು ಸಮೀಪದ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯ ಎನ್ಲಝರ್ ಫೆಸ್ಟ್ ಕಾರ್ಯಕ್ರಮ ಮಾ.23 ಮತ್ತು 24 ರಂದು ನಡೆಯಲಿದೆ. ಸಂಸ್ಥೆಯ ವಿದ್ಯಾರ್ಥಿ ಸಂಘಟನೆ ಅಲ್ ಇಖ್ವಾನುಲ್ ಹುದಾತ್ ವತಿಯಿಂದ 2016 ರಲ್ಲಿ ಕ್ವಾನ್ಕಿಸ್ಟ ಎಂಬ ಹೆಸರಿನಲ್ಲಿ ನಡೆದ ಕಾರ್ಯಕ್ರಮದ ಎರಡನೇ ಆವೃತ್ತಿ ಇದಾಗಿದೆಯೆಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯೋಜಕರಾದ ಉಮರುಲ್ ಫಾರೂಕ್, ಅಕ್ಮಲುದ್ದೀನ್ ಹಾಗೂ ಜುನೈದ್, ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಕುರಾನ್ ಫೆಸ್ಟ್, ಹದೀಸ್ ಫೆಸ್ಟ್, ಮೊಬೈಲ್ ಫೆಸ್ಟ್, ರೂಹ್‍ಅಲ್ ಮಹಬ್ಬ, ಇಂಗ್ಲೀಷ್ ವೇವ್ಸ್, ಬಝ್ಮೆ ಉರ್ದು, ಕನ್ನಡ ಕಲರವ, ಕಾಫಿ ಕೆಫೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾದ ಸುಮಾರು 30ಕ್ಕೂ ಹೆಚ್ಚಿನ ಸಂಖ್ಯೆಯ ಅತಿಥಿಗಳು ಕಾರ್ಯಕ್ರಮದಲ್ಲಿ ತರಬೇತಿ ನೀಡಲಿದ್ದಾರೆಂದರು.

ಕೇರಳದ ಕಲ್ಲಿಕೋಟೆಯ ಮರ್ಕಝ್ ನಾಲೇಜ್ ಸಿಟಿಯ ಮಾಜಿ ಸಿಇಒ ಅಬ್ದುಲ್ ರೆಹೆಮಾನ್, ಕ್ಯಾಲಿಕಟ್ ವಿಶ್ವ್ವ ವಿದ್ಯಾನಿಲಯದ ಪ್ರೊಫೆಸರ್ ಡಾ. ನುಹೈಮಾನ್, ಸಾಮಾಜಿಕ ಕಾರ್ಯಕರ್ತ ಡಾ. ಮುಬಷೀರ್, ಹೈದ್ರ್ರಾಬಾದ್ ವಿಶ್ವ ವಿದ್ಯಾನಿಲಯದ ಡಾ. ಹಫೀಝ್, ಮಶ್ಕೂರ್ ಖಲೀಲ್, ಚೆನ್ನೈ ಐಐಟಿಯ ಡಾ. ಮುಹಮ್ಮದ್ ರೊಷನ್, ಡಾ.ಸಫ್ವಾನ್ ಅಮೀರ್ ಮದ್ರಾಸ್, ಡಾ. ಮುಹಮ್ಮದ್ ಶರೀಫ್ ಪಾಲಕ್ಕಾಡ್, ಡಾ. ಇರ್ಫಾನ್ ಸಿದ್ದೀಕಿ, ಡಾ. ಮುಹಮ್ಮದ್ ರಾಫಿ ವಿಳಯಿಲ್, ಸಹದ್ ಸಲ್ಮಿತಿಬಾಕ್ ಮ್ಯಾಗಝೀನ್, ಮುಹಮ್ಮದಲಿ ಚೌಹರ್, ಬೆಂಗಳೂರಿನ ಹೆಸರಾಂತ ವಕೀಲ ಪುನಿತ್, ಇ.ಎಂ.ಎ. ಆರಿಫ್ ಬುಖಾರಿ, ಮರ್ಕಝ್ ಗಾರ್ಡನ್ ಡೈರೆಕ್ಟರ್ ಆಸಫ್ ನೂರಾನಿ, ಬೆಂಗಳೂರು ವಿದ್ಯಾಸಂಸ್ಥೆಯ  ಜಾಫರ್ ನೂರಾನಿ ಮುಂತಾದ ರಾಷ್ಟ್ರ, ಅಂತರಾಷ್ಟ್ರೀಯ ವಿಶ್ವ ವಿದ್ಯಾನಿಲಯಗಳ ಅತಿಥಿಗಳು ತರಗತಿಗಳನ್ನು ನಡೆಸಿಕೊಡಲಿದ್ದಾರೆ ಎಂದರು.

ಮಾ.23 ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಖಾಝಿ ಶೈಖುನಾ ಮುಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಹಿದಾಯತುಲ್ಲಾ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಕ್ತಿ ಪತ್ರಿಕೆಯ ಸಂಪಾದಕ ಜಿ.ರಾಜೇಂದ್ರ ಅವರು ಉಪಸ್ಥಿತರಿರುವರು. ಜಿಲ್ಲೆಯ ಉದ್ಯಮಿಗಳು, ಸಾಮಾಜಿಕ ಸೇವಾ ರಂಗದಲ್ಲಿ ಗುರುತಿಸಿಕೊಂಡ ಹತ್ತು ಹಲವು ಅತಿಥಿಗಳು ಭಾಗವಹಿಲಿದ್ದಾರೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News