ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಮಶಿನ್ ಪತ್ತೆ: ಆರೋಪಿ ಬಂಧನ

Update: 2019-03-09 19:09 GMT

ವಿಜಯಪುರ,ಮಾ.9: ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಮಶಿನ್ ಪತ್ತೆಯಾದ ಘಟನೆ ಇಂಡಿ ಪಟ್ಟಣದ ಕೆಇಬಿ ಕಾಲೋನಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಲ್ಲಪ್ಪ ಹರಿಜನ್ ಬಂಧಿತ ಆರೋಪಿ. ಈತ ಕಲರ್ ಪ್ರಿಂಟರ್ ಮಶಿನ್ ಹಾಗೂ ಸ್ಕ್ಯಾನರ್ ಮೂಲಕ ಅಸಲಿ ನೋಟ್ ಗಳನ್ನು ಸ್ಕ್ಯಾನ್ ಮಾಡಿ ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ. ನಂತರ ನಕಲಿ ನೋಟುಗಳನ್ನು ಅಸಲಿ ನೋಟುಗಳ ಜೊತೆಗೆ ಸೇರಿಸಿ ಚಲಾಯಿಸುತ್ತಿದ್ದ ಎನ್ನಲಾಗಿದೆ. 

ನಕಲಿ ನೋಟ್ ತಯಾರಿಕೆ ಬಗ್ಗೆ ಮೊದಲು ಮಾಹಿತಿ ಪಡೆದ ಇಂಡಿ ನಗರ ಪಿಎಸೈ ರವಿ ಯಡವನ್ನವರ್ ಹಾಗೂ ಇಂಡಿ ಗ್ರಾಮೀಣ ಪಿಎಸ್ಐ ಸಿಂದೂರ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News