ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ರಾಮ್‌ ವಿಲಾಸ್ ಪಾಸ್ವಾನ್ ನಿರ್ಧಾರ

Update: 2019-03-10 18:34 GMT

ಪಾಟ್ನ, ಮಾ.10: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಸ್ಪರ್ಧಿಸುವುದಿಲ್ಲ . ರಾಜ್ಯಸಭಾ ಸದಸ್ಯರಾಗಿ ಸಂಸತ್ತಿಗೆ ಪ್ರವೇಶಿಸಲು ಅವರು ನಿರ್ಧರಿಸಿದ್ದಾರೆ ಎಂದು ಅವರ ಸಹೋದರ ತಿಳಿಸಿದ್ದಾರೆ.

ರಾಮ್‌ವಿಲಾಸ್ ಪಾಸ್ವಾನ್ ಸ್ಪರ್ಧಿಸದಿರುವ ನಿರ್ಧಾರ ಎರಡು ತಿಂಗಳ ಹಿಂದೆಯೇ ಅಂತಿಮವಾಗಿತ್ತು ಎಂದು ಬಿಹಾರ ಸರಕಾರದಲ್ಲಿ ಸಚಿವರಾಗಿರುವ ಪಾಸ್ವಾನ್ ಸಹೋದರ ಪಶುಪತಿ ಪಾರಸ್ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರಾಗಿರುವ 72 ವರ್ಷದ ಪಾಸ್ವಾನ್, ಎನ್‌ಡಿಎ ನೆರವಿನಿಂದ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾಗುವ ವಿಶ್ವಾಸ ಹೊಂದಿದ್ದಾರೆ.

ಬಿಹಾರದ ಹಾಜಿಪುರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಪಾಸ್ವಾನ್, ಈ ಕ್ಷೇತ್ರದಿಂದ 1977ರಲ್ಲಿ 4.24 ಲಕ್ಷ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಮೂರು ದಶಕಗಳಿಂದ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News